ಶಿರಸಿ: ಯಶಸ್ಸು ಪಡೆಯುವ ಉತ್ಸಾಹ ಇದ್ದರೆ ವಯಸ್ಸು ಯಾವುದಕ್ಕೂ ಅಡ್ಡಿ ಬಾರದು ಎಂಬುದಕ್ಕೆ ಶಿರಸಿಯಲ್ಲಿ 70 ವರ್ಷ ವಯಸ್ಸಿನ ನವ ಯುವಕರೇ ನಾಚಿಸುಂತೆ ಸಿಎಲ್ ಡಿಪ್ಲೊಮಾ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದ (Civil Engineering Diploma )ಪರೀಕ್ಷೆ ಯಲ್ಲಿ ಶಿರಸಿಯ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ 70ರ ಹರೆಯದ ನಾರಾಯಣ ಎಸ್.ಭಟ್ಟ, ರಾಜ್ಯಕ್ಕೆ ಪುಥಮ ಸ್ಥಾನ ಪಡೆದಿದ್ದಾರೆ.
2019-20 ರಿಂದ 2021-22ನೇ ಸಾಲಿನ ಡಿಪ್ಲೊಮಾ ಪರೀಕ್ಷೆಯ ಫಲಿತಾಂಶವನ್ನು ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು ಶೇ.94ರಷ್ಟು ಅಂಕ ಗಳಿಕೆಯೊಂದಿಗೆ ಸಿವಿಲ್ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯದಲ್ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಎಂಬ ಹಿರಿಮೆಗೆ ಇಳಿ ವಯಸ್ಸಿನ ವ್ಯಕ್ತಿ ಪಾತ್ರರಾಗಿದ್ದಾರೆ.
ತಾಲ್ಲೂಕಿನ ಸುಗಾವಿ ಮೂಲದ ನಾರಾಯಣ ಅವರು ಸದ್ಯ ಶಿರಸಿಯಲ್ಲಿ ನೆಲೆಸಿದ್ದಾರೆ. 1973ರಲ್ಲೇ ಮೆಕ್ಯಾನಿಕಲ್ ಡಿಪ್ಲೊಮಾ ಎಂಜಿನಿಯಗ್ ಪದವಿ ಪಡೆದಿದ್ದರು.ಬಳಿಕ ಕಾರವಾರ, ಗುಜರಾತ್ ಸೇರಿದಂತೆ ವಿವಿಧೆಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. 2013ರಲ್ಲಿ ನಿವೃತ್ತಿ ಪಡೆದು ಶಿರಸಿಗೆ ಮರಳಿದ ಅವರು ಪುನಃ ಡಿಪ್ಲೊಮಾ ಕಲಿಕೆಗೆ ಆಸಕ್ತಿ ತೋರಿದ್ದರು. ಅವರಿಗೆ ಪ್ರವೇಶಾತಿ ನೀಡಲು ತಾಂತ್ರಿಕ ಅಡಚಣೆ ಎದುರಾಗಿತ್ತು. ಅಂತಿಮವಾಗಿ 2019ರಲ್ಲಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಡಿಪ್ಲೊಮಾ ವಿಭಾಗಕ್ಕೆ ಪ್ರವೇಶ ದೊರೆತಿತ್ತು.
ತಮ್ಮ ಮೊಮ್ಮಕ್ಕಳ ವಯಸ್ಸಿನವರೊಂದಿಗೆ ಬೆರೆತು ಕಾಲೇಜಿನಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಪ್ರತಿ ಬಾರಿ ಪರೀಕ್ಷೆಯಲ್ಲಿ ಮೊದಲಿಗರಾಗಿ ಬರುತಿದ್ದರು.