• Slide
    Slide
    Slide
    previous arrow
    next arrow
  • ಮತದಾರರ ಗುರುತಿನ ಚೀಟಿ, ಆಧಾರ್ ಜೋಡಣೆ ವಿರೋಧಿಸಿ ಮನವಿ ಸಲ್ಲಿಕೆ

    300x250 AD

    ಕುಮಟಾ: ಪುರಸಭಾ ವ್ಯಾಪ್ತಿಯ ಸಿಬ್ಬಂದಿಗಳು ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ತಮ್ಮಮತದಾರರ ಗುರುತಿನ ಚೀಟಿಯಲ್ಲಿ ಆಧಾರ ನಂಬರ್ ಜೋಡಣೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದು ಆ ರೀತಿ ಮಾಡದೇ ಇದ್ದಲ್ಲಿ ಅಂತವರಿಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಸಿಗುವುದಿಲ್ಲ ಎಂದು ಭಯ ಹುಟ್ಟಿಸಿ ಒತ್ತಾಯ ಪೂರ್ವಕವಾಗಿ ಮತದಾರರ ಗುರುತಿನ ಚೀಟಿಯಲ್ಲಿ ಆಧಾರ ನಂಬರ್ ಜೋಡಣೆ ಮಾಡಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಹೀಗೆ ಮಾಡುವುದರಿಂದ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ಅದರ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಮತದಾರರ ಯಾದಿಯು ಸಾರ್ವಜನಿಕ ದಾಖಲೆಯಾಗಿದ್ದು ಅದನ್ನು ಯಾರು ಬೇಕಾದರೂ ಅರ್ಜಿ ನೀಡಿ ಪಡೆದುಕೊಳ್ಳಬಹುದಾದಂತಹ ದಾಖಲೆಯಾಗಿ ಮಾರ್ಪಡುವುದರಿಂದ ಸಾರ್ವಜನಿಕರ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ಇಲ್ಲಸಲ್ಲದ ಅವಾಂತರಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಅದರಿಂದ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನದ ಹಕ್ಕಿಗೆ ಚ್ಯುತಿಯಾಗುವ ಸಾಧ್ಯತೆ ಇರುತ್ತದೆ.

    ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಮತದಾರರ ಯಾದಿ ಹಾಗೂ ಗುರುತಿನ ಚೀಟಿಯಲ್ಲಿ ಆಧಾರ ನಂ. ಜೋಡಣೆ ಕಡ್ಡಾಯವಲ್ಲವೆಂದು ಈಗಾಗಲೇ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿರುತ್ತದೆ.ಆದಾಗ್ಯೂ ಪುರಸಭೆಯ ಸಿಬ್ಬಂದಿಗಳು ಸಾರ್ವಜನಿಕರನ್ನು ಪೀಡಿಸುತ್ತಿದ್ದು ಆ ಬಗ್ಗೆ ಅವರಿಗೆ ಚುನಾವಣಾ ಆಯೋಗವು ಸ್ಪಷ್ಟನೆಯನ್ನು ತೋರಿಸಿದಾಗ ಅವರು ನಮಗೆ ಸಹಾಯಕ ಆಯುಕ್ತರಿಂದ ನಿರ್ದೇಶನವಿದೆ.ನಾವು ಅಸಹಾಯಕರು ಎಂದು ಅಳಲು ತೋಡಿಕೊಂಡಿರುತ್ತಾರೆ.ಹೀಗಾಗಿ ಪುರಸಭೆಯ ಸಿಬ್ಬಂದಿಗಳು ಆ ರೀತಿ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕಾಗಿ ಮನವಿ ಸಲ್ಲಿಸಿದ್ದಾರೆ.

    300x250 AD

    ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಶೇಟ್, ಸಂದೀಪ ಎಮ್ ಪೈ, ಭಾಸ್ಕರ ಪಟಗಾರ, ರಾಜು ಅಂಬಿಗ, ಮಂಜು ಪಟಗಾರ, ಪರಶುರಾಮ, ಮಾರುತಿ ಗೌಡ, ಮಹೇಶ, ಶೈಲೇಶ ಶಾನಭಾಗ್, ಜಗದೀಶ ಪೈ ಹಾಗೂ ಇತರರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top