• first
    second
    third
    previous arrow
    next arrow
  • ಯುವಸಂಸತ್ತು ಸ್ಪರ್ಧೆ: ಲಯನ್ಸ್ ವಿದ್ಯಾರ್ಥಿನಿ ಇಶಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

    300x250 AD

    ಶಿರಸಿ: ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ, ಬೆಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ ಇವರ ಸಹಯೋಗದಲ್ಲಿ ಸೆ. 20ರಂದು ಶಿರಸಿಯ ಆವೆಮೇರಿಯಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಯುವಸಂಸತ್ತು ಸ್ಪರ್ಧೆಯಲ್ಲಿ ನಗರದ ಲಯನ್ಸ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ. ಇಶಾ ರವಿಕಿರಣ ಪಟವರ್ಧನ್ ತನ್ನ ವಾಕ್ ಚಾತುರ್ಯ ಪ್ರದರ್ಶಿಸಿ ಸ್ಪರ್ಧೆಯಲ್ಲಿ ವಿಜೇತಳಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

    ವಿದ್ಯಾರ್ಥಿನಿಗೆ ಶಾಲೆಯ ಸಹಶಿಕ್ಷಕರಾದ ಗಣಪತಿ ಗೌಡ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಸಹಕರಿಸಿದ ಪಾಲಕರಿಗೆ, ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂದವರು, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿವಂದಿಸಿ ಶುಭ ಹಾರೈಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top