Slide
Slide
Slide
previous arrow
next arrow

ವಿಶ್ವೇಶ್ವರಯ್ಯನವರು ತೋರಿದ ಸನ್ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಲು ರಾಯ್ಕರ್ ಕರೆ

300x250 AD

ಹೊನ್ನಾವರ: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಈ ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾ, ಅವರ ಆದರ್ಶ, ಉದಾತ್ತ ಧ್ಯೇಯಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಆಡಳಿತ) ನಾಗೇಶ ರಾಯ್ಕರ ತಿಳಿಸಿದರು.
ಅವರು ತಾಲೂಕ ಪಂಚಾಯತ ಸಭಾಭವನದಲ್ಲಿ ಆಯೋಜಿಸಿದ್ದ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವಕರ್ನಾಟಕ ನಿರ್ಮಾಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಕೊಡುಗೆಗಳು ಜೀವನದ ಸಾಧನೆಗಳನ್ನು ಸ್ಮರಿಸುತ್ತಾ ಮೈಸೂರು ಸಂಸ್ಥಾನದಲ್ಲಿ ಪ್ರಧಾನ ಇಂಜಿನಿಯರ್ ಮತ್ತು ದಿವಾನರಾಗಿ ಸಮಗ್ರ ಭಾರತವೇ ತಮ್ಮತ್ತ ನೋಡುವಂತಹ ಯೋಜನೆಗಳ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಹಾಗೂ ಅವರ ಅಪಾರ ಜ್ಞಾನ, ಸಮಯ ಪಾಲನೆ ಕೆಲಸದಲ್ಲಿ ಅಚ್ಚುಕಟ್ಟುತನ, ಪ್ರಾಮಾಣಿಕ ಕಾರ್ಯಗಳನ್ನು ಸ್ಮರಿಸಿದರು. ಹಾಗು ಅವರು ತೋರಿಸಿದ ಸನ್ಮಾರ್ಗದಲ್ಲಿ ಯುವ ಅಭಿಯಂತರರು ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ನಾಯ್ಕ, ಇಂಜಿನಿಯರ್ ದಿನಾಚರಣೆಯ ಮಹತ್ವ, ರಾಷ್ಟ್ರನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರದ ಕುರಿತು ವಿವರಿಸಿದರು. ವೇದಿಕೆಯಲ್ಲಿ ಸಹಾಯಕ ನಿರ್ದೇಶಕರು ಕೃಷ್ಣಾನಂದ ಕೆ.ರವರು ಉಪಸ್ಥಿತರಿದ್ದರು. ತಾಲೂಕ ಪಂಚಾಯತ ಅಭಿಯಂತರರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ತಾಲೂಕ ಪಂಚಾಯತ ಸಿಬ್ಬಂದಿ ಬಾಲಚಂದ್ರ ನಾಯ್ಕ ಸ್ವಾಗತಿಸಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top