Slide
Slide
Slide
previous arrow
next arrow

ಅವಶ್ಯಕ ಯೋಜನೆಗಳನ್ನು ಟಿಎಸ್‌ಎಸ್ ಜಾರಿಗೆ ತರುತ್ತದೆ: ರವೀಶ ಹೆಗಡೆ

300x250 AD

ಸಿದ್ದಾಪುರ: ಶಿರಸಿಯಲ್ಲಿರುವ ಟಿಎಸ್‌ಎಸ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ವೈದ್ಯರು ಶಿರಸಿಯಂತಹ ಎಲ್ಲಾ ಸೌಲಭ್ಯ ಇರುವ ಊರಿಗೆ ಬರುತ್ತಿಲ್ಲ. ಪುಟ್ಟ ಪಟ್ಟಣವಾದ ಸಿದ್ದಾಪುರಕ್ಕೆ ಬರುವುದಿಲ್ಲ. ಕೇವಲ ಕಟ್ಟಡ ಕಟ್ಟುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವಾರಕ್ಕೆ ಎರಡು ದಿನ ಇಲ್ಲಿ ಟಿಎಸ್‌ಎಸ್ ಆಸ್ಪತ್ರೆಯ ವೈದ್ಯರಿಂದ ಕ್ಯಾಂಪ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಆಯಾ ಶಾಖೆಯ ಲಾಭ ಅಲ್ಲಿಯ ವ್ಯವಸ್ಥೆಗೆ ಖರ್ಚಾಗುತ್ತದೆ. ಇಲ್ಲಿಯ ಲಾಭ ಶಿರಸಿಗೆ ಹೋಗುತ್ತದೆ ಎನ್ನುವುದು ಸುಳ್ಳು. ಇಲ್ಲಿ ಸದಸ್ಯರಿಗೆ ಯಾವುದಾದರೂ ಉಪಯೋಗವಾಗುವ ಯೋಜನೆಗಳ ಅವಶ್ಯಕತೆ ಇದ್ದರೆ ತಿಳಿಸಿದರೆ ಖಂಡಿತಾ ಮಾಡಲಾಗುತ್ತದೆ ಎಂದು ಟಿಎಸ್‌ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದರು.
ಅವರು ಪಟ್ಟಣದ ಟಿಎಸ್‌ಎಸ್ ಸಭಾಭವನದಲ್ಲಿ ಸಂಘದ ಸಿದ್ದಾಪುರ ಶಾಖೆಯ 2022-23ನೇ ಸಾಲಿನ ಸರ್ವಸಾಧಾರಣಾ ಸಭೆಯಲ್ಲಿ ಮಾತನಾಡಿ, ಸಿದ್ದಾಪುರದಲ್ಲಿ ಸೌಲಭ್ಯಗಳಿರುವ ಆಸ್ಪತ್ರೆ ಇಲ್ಲ. ಸರಕಾರಿ ಆಸ್ಪತ್ರೆಯಲ್ಲೂ ಹಿಂದಿನಂತಹ ವೈದ್ಯರಿಲ್ಲ ಇದರಿಂದ ಕೇವಲ ಸಂಘದ ಸದಸ್ಯರಿಗಷ್ಟೆ ಅಲ್ಲ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಟಿಎಸ್‌ಎಸ್‌ ವತಿಯಿಂದ ಮೊಬೈಲ್ ಆಸ್ಪತ್ರೆಯನ್ನು ಮಾಡಬೇಕು. ಸಿದ್ದಾಪುರ ಶಾಖೆಯಿಂದಲೂ ಟಿಎಸ್‌ಎಸ್ ಸಂಸ್ಥೆಗೆ ಲಾಭವಿದೆ. ಆದರೆ ಎಲ್ಲಾ ಸೌಲಭ್ಯಗಳು ಶಿರಸಿಗೆ ಮಾತ್ರ ಸೀಮಿತವಾಗಿದೆ. ಸಂಘದ ಸೌಲಭ್ಯಗಳು ಸಿದ್ದಾಪುರಕ್ಕೂ ವಿಸ್ತರಿಸಬೇಕು ಎಂದು ಸದಸ್ಯರಿಂದ ಸಭೆಯಲ್ಲಿ ಒತ್ತಾಯಿಸಲಾಯಿತು.
ಶಿವಾನಂದ ಹೆಗಡೆ, ವಿ.ಎನ್.ನಾಯ್ಕ ಬೇಡ್ಕಣಿ, ಕೇರಿಯಪ್ಪ ನಾಯ್ಕ ಬಾನ್ಕುಳಿ, ಸಿ.ಎಸ್.ಗೌಡರ್ ಹೆಗ್ಗೊಡಮನೆ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಟಿಎಸ್ ಎಸ್ ಜೊತೆ ವ್ಯವಹಾರ ನಡೆಸುವ ಸಹಕಾರಿ ಸಂಘಗಳಿಗೆ ಬಹುಮಾನ ನೀಡಲಾಯಿತು. ಟಿಎಸ್‌ಎಸ್ ಉಪಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಅಧ್ಯಕ್ಷತೆ ವಹಿಸಿದ್ದರು. ಇತರ ನಿರ್ದೇಶಕರು ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕ ರಾಜೀವ ಹೆಗಡೆ ವರದಿವಾಚನ ಮಾಡಿದರು. ನಿರ್ದೇಶಕ ಆರ್.ಟಿ.ಹೆಗಡೆ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ವಿಜಯ- ಸುಷ್ಮಾ ಪ್ರಾರ್ಥನೆ ಹಾಡಿದರು. ಬಾಲಚಂದ್ರ ಹೆಗಡೆ ವಂದಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ: ಸಂಘದ ಹಿರಿಯ ಸದಸ್ಯರಾದ ಗೌರಿ ಪುಟ್ಟಾ ಗೌಡ ಕುಂಬಾರಕುಳಿ, ಈರಾ ನಾಯ್ಕ ಕೋಲಸಿರ್ಸಿ, ಶಿವಾನಂದ ಹೆಗಡೆ ತಾರಗೋಡು, ಬಸವಣ್ಣಿ ನಾಯ್ಕ ಕಡಕೇರಿ, ಅನಂತ ಹೆಗಡೆ ಕರ್ಕಿಸವಲ್, ದತ್ತಾತ್ರೇಯ ಹೆಗಡೆ ಕರ್ಮನೆ, ಗಣಪತಿ ಭಟ್ಟಬೇಗಾರ, ತಿಮ್ಮ ಮಡಿವಾಳ ಕೆರೆಮಠ, ಗಣಪತಿ ಭಟ್ಟ ಕ್ಯಾದಗಿಮಠ, ಭಾಸ್ಕರ ಹೆಗಡೆ ಗುಂಜಗೋಡು ಅವರನ್ನು ಸನ್ಮಾನಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top