• Slide
    Slide
    Slide
    previous arrow
    next arrow
  • ಜೀವವೈವಿಧ್ಯ ಕುರಿತು ವೆಬಿನಾರ್- ಉಪನ್ಯಾಸ

    300x250 AD

    ಕಾರವಾರ: ವಿಶ್ವ ವನ್ಯಜೀವಿ ಒಕ್ಕೂಟದ ಭಾರತ ಶಾಖೆಯ ಮತ್ತು ಇಲ್ಲಿನ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜೀವವೈವಿಧ್ಯ ವಿಷಯದ ಮೇಲೆ ರಾಷ್ಟ್ರಮಟ್ಟದ ವೆಬಿನಾರ್- ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು.
    ಈ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ವ ವನ್ಯಜೀವಿ ಒಕ್ಕೂಟದ ಕರ್ನಾಟಕ ರಾಜ್ಯ ಕಛೇರಿಯ ಮುಖ್ಯಸ್ಥೆ ಸೌಂದರ್ಯವಲ್ಲಿ ಎಮ್.ಆರ್. ಪ್ಲಾಸ್ಟಿಕ್ ಮಾಲಿನ್ಯ ಹಾಗೂ ನಮ್ಮ ದಿನನಿತ್ಯದ ಜೀವನಶೈಲಿಯಿಂದ ಜೀವೈವಿಧ್ಯತೆಗಳ ಮೇಲೆ ಉಂಟಾಗುವ ಪ್ರಭಾವದ ಕುರಿತು ಮತ್ತು ಯುವ ಪೀಳಿಗೆಗಳು ಇದನ್ನು ತಡೆಗಟ್ಟಲು ಹೊಸ ತಂತ್ರ ವಿಧಾನಗಳನ್ನು ಕೈಗೊಳ್ಳುವುದು ಹಾಗೂ ಇದರ ಬಗ್ಗೆ ಇತರರಿಗೆ ಅರಿವು ಮೂಡಿಸುವ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
    ಪ್ಲಾಸ್ಟಿಕ್ ಮಾಲಿನ್ಯದಿಂದ ಸಾಗರ ಜೀವಿಗಳ ಮೇಲೆ ಮತ್ತು ಮಾನವನ ಮೇಲೆ ಉಂಟಾಗುವ ಅಪಾಯಗಳು ಹಾಗೂ ಇದನ್ನು ತಡೆಗಟ್ಟಲು ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಕುರಿತು ಸಂಪನ್ಮೂಲ ವ್ಯಕ್ತಿ, ಕರ್ನಾಟಕ ವಿಶ್ವವಿದ್ಯಾಲಯ ಸಾಗರ ವಿಜ್ಞಾನ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎನ್.ನಾಯಕ ಉಪನ್ಯಾಸ ನೀಡಿದರು.

    ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಸಾಗರದ ಶ್ರೀಮತಿ ಇಂದಿರಾಗಾಂಧಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ಭಟ್, ಕಾಂಡ್ಲಾ ಸಸ್ಯಗಳು, ಅವುಗಳ ಉಪಯೋಗ ಮತ್ತು ಅವುಗಳ ವಿವಿಧ ಪ್ರಭೇದಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
    ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಒಟ್ಟು 250 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಹಲವು ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರ ಪಡೆದುಕೊಂಡರು.
    ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ವಿಶ್ವ ವನ್ಯಜೀವಿ ಒಕ್ಕೂಟದ ಭಾರತ ಶಾಖೆಯ ಸ್ವಯಂ ಸೇವಕ ಎಮ್.ಅಮಾನ್ ಶೇಖ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೂ ಇ- ಸರ್ಟಿಫಿಕೇಟ್‌ಗಳನ್ನ ನೀಡಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top