Slide
Slide
Slide
previous arrow
next arrow

ಭಾರತದ ನಾಗರಿಕರೆಂಬುದು ಹೆಮ್ಮೆಯ ಸಂಗತಿ: ಸ್ಟೀಫನ್

300x250 AD

ಹೊನ್ನಾವರ: ನಾವೆಲ್ಲರು ಈ ಹೆಮ್ಮೆಯ ಭಾರತೀಯ ಭೂಮಿಯಲ್ಲಿ ಜನಸಿದ್ದು, ಈ ದೇಶದ ನಾಗರಿಕರು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ವಿ.ಕೇರ್ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಸ್ಟೀಫನ್ ರೊಡ್ರಗೀಸ್ ಹೇಳಿದರು.
ಅವರು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಬೆಂಗಳೂರಿನಿಂದ ಆನ್‌ಲೈನ್ ಮೂಲಕ ಮಾತನಾಡಿ, ದೇಶದೆಲ್ಲಡೆ ಇಂದು ಸಂಭ್ರಮದಿಂದ ಸ್ವಾತಂತ್ರ‍್ಯ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷವು ಇದನ್ನು ರಾಷ್ಟ್ರೀಯ ಹಬ್ಬದ ರೀತಿ ಆಚರಿಸಲಾಗುತ್ತಿದೆ. ನಾವೆಲ್ಲರು ಕಳೆದ ಎರಡು ದಿನದಿಂದ ತಮ್ಮ ಮನೆ ಹಾಗೂ ಕಛೇರಿಯ ಮೇಲೆ ದೇಶದ ಧ್ವಜವನ್ನು ಹಾರಿಸುವ ಮೂಲಕ ಘರ್ ಘರ್ ತಿರಂಗಾ ಮೂಲಕ ದೇಶಭಕ್ತಿಯನ್ನು ಇಮ್ಮಡಿಗೊಳಿಸಲಾಗಿದೆ. ದೇಶ ನನ್ನದು, ದೇಶಕ್ಕಾಗಿ ನಾವೆಲ್ಲರು ಎನ್ನುವ ನಿರ್ಧಾರ ಹೊಂದಿದ್ದು, ಮುಂದೆಯೂ ಈ ಭಾವನೆಯನ್ನು ನಾವೆಲ್ಲರೂ ಒಗ್ಗೂಡಿ ಕಾರ್ಯರೂಪಕ್ಕೆ ತರೋಣ. ಸಮಾಜದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಕಾರ್ಯ ಮುಂದುವರೆಸಿ ದೇಶ ಸೇವೆಗೆ ಅಣಿಯಾಗೋಣ ಎಂದು ಶುಭಹಾರೈಸಿದರು.
ಪ್ರಧಾನ ಶಾಖೆಯಾದ ಹೊನ್ನಾವರ, ಇತರೆ ಶಾಖೆಗಳಾದ ಕುಮಟಾ, ದಾಂಡೇಲಿ, ಹಳಿಯಾಳದಲ್ಲಿ ಶಾಖೆಯ ಮ್ಯಾನೇಜರ್ ಧ್ವಜಾರೋಹಣ ನೇರವೇರಿಸಿದರು. ಶಾಖೆಯು ತಳಿರು ತೋರಣ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಸಿಬ್ಬಂದಿಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ದೇಶಭಕ್ತಿ ಘೋಷಣೆ ಮೊಳಗಿಸಿ ಸಂಭ್ರಮ ವ್ಯಕ್ತಪಡಿಸಿದರು.

300x250 AD
Share This
300x250 AD
300x250 AD
300x250 AD
Back to top