Slide
Slide
Slide
previous arrow
next arrow

ಸೋರುತ್ತಿರುವ ಗ್ರಂಥಾಲಯ ಕಟ್ಟಡ ಸರಿಪಡಿಸಲು ಆಗ್ರಹ

300x250 AD

ಜೊಯಿಡಾ: ತಾಲೂಕಿನ ಕೇಂದ್ರ ಸ್ಥಾನ ಜೊಯಿಡಾದಲ್ಲಿರುವ ನೂತನವಾಗಿ ನಿರ್ಮಿಸಿದ ಗ್ರಂಥಾಲಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದು, ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿದೆ.
ಜೊಯಿಡಾದಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಿಸಲಾದ ಗ್ರಂಥಾಲಯ ಕಟ್ಟಡ ಮಳೆ ಬಂದರೆ ಸೋರುತ್ತದೆ. ಗೋಡೆಗಳು ಒದ್ದೆಯಾಗಿ ಗ್ರಂಥಾಲಯದ ಒಳ ಭಾಗದಲ್ಲಿ ನೀರು ಬರುತ್ತಿದೆ. ಗ್ರಂಥಾಲಯದಲ್ಲಿ ಬಹಳಷ್ಟು ಪುಸ್ತಕಗಳು ಇರುವ ಕಾರಣ ಮಳೆ ನೀರಿನಿಂದಾಗಿ ಹಾಳಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಈ ಗ್ರಂಥಾಲಯದ ಶೌಚಾಲಯದಲ್ಲಿ ನೀರು ಹೋಗುವ ಪೈಪ್ ಕಡೆಗೆ ನೀರು ಸಾಗದೆ ಬೇರೆ ಭಾಗದಲ್ಲಿ ನೀರು ಶೇಖರಣೆಯಾಗುತ್ತಿದೆ.
ಗ್ರಂಥಾಲಯಕ್ಕೆ ಕಂಪೌಂಡ್ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಬಿಡಾಡಿ ದನಗಳು ಗ್ರಂಥಾಲಯದ ಮುಂಭಾದಲ್ಲಿ ಮಲಗಿ ಸಗಣಿ, ಮೂತ್ರ ಮಾಡುವುದರಿಂದ ದಿನವು ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ತಾಲೂಕಾ ಆಡಳಿತ ಗಮನ ಹರಿಸಿ ಕೂಡಲೇ ಸೋರುತ್ತಿರುವ ಗ್ರಂಥಾಲಯ ಕಟ್ಟಡಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕಿದೆ.

300x250 AD
Share This
300x250 AD
300x250 AD
300x250 AD
Back to top