• first
    second
    third
    previous arrow
    next arrow
  • ಬೈಕ್ ಸ್ಕಿಡ್: ಬಿದ್ದ ಪರಿಣಾಮ ಕಾಲೇಜ್ ಉಪನ್ಯಾಸಕ ಮೃತ

    300x250 AD

    ಅಂಕೋಲಾ: ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಕಾಲೇಜ್ ಉಪನ್ಯಾಸಕರೋರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ರಾ.ಹೆ.66ರ ಬೆಳೆಸೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

    ತಾಲೂಕಿನ ವಾಸರೆಕುದ್ರಿಗೆಯ ನಿವಾಸಿ ಅರವಿಂದ ಆಗೇರ (49) ಮೃತಪಟ್ಟ ದುರ್ದೈವಿ. ಇವರು ಅಂಕೋಲಾ ಪಟ್ಟಣದ ಪಿ.ಎಂ.ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ವಿಷಯದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುಂಜಾನೆ ವಾಸರೆ ಕುದ್ರಿಗೆಯಿಂದ ಕಾಲೇಜಿಗೆ ಬರುತ್ತಿರುವ ವೇಳೆ ಬೈಕ್ ಸ್ಕಿಡ್ ಆದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗಮದ್ಯೆ ಮೃತಪಟ್ಟಿರುತ್ತಾರೆ. ಘಟನೆ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top