• Slide
    Slide
    Slide
    previous arrow
    next arrow
  • ಸಾಮಾಜಿಕ ಜಾಲತಾಣ ಪ್ರಕೋಷ್ಟ ರಾಘು ಕುಂದರಗಿ ರಾಜಿನಾಮೆ

    300x250 AD

    ಯಲ್ಲಾಪುರ: ಇತ್ತೀಚಿಗೆ ನಡೆದ ಪ್ರವೀಣ ನೆಟ್ಟಾರ ಹತ್ಯೆ ಪ್ರಕರಣವು ರಾಜ್ಯದಲ್ಲಿ ತಲ್ಲಣ ಎಬ್ಬಿಸಿದೆ. ಹಲವಾರು ಬಿಜೆಪಿ ಯುವ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುತ್ತಿದ್ದಾರೆ‌.

    ಅಂತೆಯೇ ಜಿಲ್ಲೆಯ ಭಾಜಪಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ,ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಹೆಗಡೆ ಕುಂದರಗಿ ಇವರು ಕೂಡಾ ತಮ್ಮ ರಾಜಿನಾಮೆ ಪತ್ರವನ್ನು ಭಾಜಪಾ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್ ಇವರಿಗೆ  ಸಲ್ಲಿಸಿದ್ದಾರೆ.

    ರಾಜಿನಾಮೆ ಪತ್ರದಲ್ಲಿ ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಷ್ಟೇ ಅಲ್ಲದೇ ತನ್ನದೇ ಆದಂತಹ ಇತಿಹಾಸ,ಸಿದ್ಧಾಂತ, ವಿಚಾರಧಾರೆಗಳನ್ನು ಹೊಂದಿದೆ.ಆದರೆ ಇಂದಿನ ದಿನದಲ್ಲೂ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವ ದುರ್ಗತಿ ಬಂದಿದ್ದು ಕಾರ್ಯಕರ್ತರಿಗೆ ನೋವಿನ ಸಂಗತಿಯಾಗಿದೆ.ಯುವ ಮಿತ್ರರ ಹತ್ಯೆಗಳು ಕಣ್ಮುಂದೆ ಬರುತ್ತಿದ್ದು ಆದರೆ ಕಠಿಣ ಕ್ರಮ ಎನ್ನುವುದು ಕೇವಲ ಭರವಸೆಯಾಗಿ ಉಳಿದಿರುವ ಕಾರಣಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

    300x250 AD

     ಪಕ್ಷ ನಮ್ಮನ್ನು ಗುರುತಿಸುವ ಮೊದಲು ನಮ್ಮ ಸುತ್ತಮುತ್ತಲಿನ ಜನತೆ ನಮ್ಮನ್ನು ಗುರುತಿಸಿದ್ದಾರೆ.ಇಂದು ನಮ್ಮ ಸಾಮಾಜಿಕ ಜಾಲತಾಣದಲ್ಲಿರುವ ಮತ್ತು ನಮ್ಮ ಸುತ್ತಮುತ್ತಲಿನ ಜನತೆಗೆ ಸ್ನೇಹಿತರಿಗೆ ಬೇಜಾರಾಗುವ ರೀತಿಯಾಗಿದೆ.ನಾವು ಈ ಹಿಂದೆ ನಾವು ಹೇಳಿದ ಹಾಗೆ ನಮ್ಮ ಪಕ್ಷವನ್ನು ಗೆಲ್ಲಿಸಬೇಕು ಮತದಾನ ಮಾಡಿ ಎಂದು ಹೇಳಿದಾಗ ಯಾರು ಇಲ್ಲವೆಂದಿಲ್ಲಾ ಅಂತಹ ನಮ್ಮ ಸ್ನೇಹಿತರಿಗೆ ಇಂದು ಬೇಜಾರಿನ ಈ ಸರ್ಕಾರದ ಬಗ್ಗೆ.ಇನ್ನು ಅವರಲ್ಲಿ ಸರ್ಕಾರದ ಬಗ್ಗೆ ಸಮರ್ಥನೆ ಮಾಡಿಕೊಂಡರೆ ನಮ್ಮ ಮೇಲಿರುವ ಅಭಿಮಾನವು ಇಲ್ಲದಂತಾಗುವುದರಿಂದ ನನ್ನ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.ಆದರೆ ಜನತೆಗೆ  ನನ್ನ ಸಾಮಾಜಿಕ ಕೆಲಸವು ನಿರಂತರವಾಗಿ ನಡೆಯುತ್ತಲೆ ಇರುತ್ತದೆ ಎಂದು ರಾಘು ಕುಂದರಗಿ ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top