• Slide
    Slide
    Slide
    previous arrow
    next arrow
  • ಕಳಸನಮೋಟೆ ನಂ.1 ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

    300x250 AD

    ಹೊನ್ನಾವರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಸನಮೋಟೆ ನಂ.1ರಲ್ಲಿ ಕಾಸರಕೋಡ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸ್ಥಳೀಯರು ಆಗಿರುವ ಮಂಜು ಗೌಡ ಅವರು ಕಳಸನಮೋಟೆಯ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ, ಇದೊಂದು ಶೈಕ್ಷಣಿಕ ಕಳಕಳಿಯ ಕಾರ್ಯಕ್ರಮ. ಮಂಜು ಗೌಡರು ಮೊದಲಿನಿಂದಲೂ ಶಾಲಾ ಶಿಕ್ಷಣದ ಅಭಿವೃದ್ಧಿಯ ಕುರಿತು ನನ್ನ ಜೊತೆ ಮಾತನಾಡುತ್ತಿದ್ದರು. ಇಂದಿನ ಕಾರ್ಯಕ್ರಮ ಅವರು ಶಿಕ್ಷಣದ ಬಗ್ಗೆ ಇಟ್ಟಿರುವ ಅಭಿಮಾನವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಆಶಿಸಿದರು.

    ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ.ನಾಯ್ಕ ಮಾತನಾಡಿ, ಕಾರ್ಯಕ್ರಮಕ್ಕೆ ಸೇರಿರುವ ಪಾಲಕ,ಪೋಷಕರ ಸಂಖ್ಯೆಯನ್ನು ಗಮನಿಸಿದಾಗ ನಿಮ್ಮಲ್ಲಿರುವ ಶಿಕ್ಷಣದ ಕಳಕಳಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದಾಗುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಹೇಳಿದರು.

    ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸುವ ಮಂಜು ಗೌಡ ಮಾತನಾಡುತ್ತಾ, ನನ್ನ ಭಾಗದ ಮಕ್ಕಳಿಗೆ ಅನುಕೂಲವಾಗಲಿ ನಾವು ನೀಡುತ್ತಿರುವ ಕಲಿಕಾ ಉಪಕರಣಗಳು ಮಗುವಿನ ಶೈಕ್ಷಣಿಕ ಬದುಕಿಗೆ ಉಪಯುಕ್ತವಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಸಂಘಟಿಸೋಣ ಎನ್ನುವ ಅಭಿಮಾನದ ಮಾತನ್ನು ಹೇಳಿದರು.

    300x250 AD

    ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಸುಧೀಶ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಕಾಸರಕೋಡ ಭಾಗದ ಮೇಲ್ವಿಚಾರಕಿ ಭಾರತಿ ಹೆಗಡೆ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ಗೌಡ, ನಿಕಟಪೂರ್ವ ಎಸ್‌ಡಿಎಂಸಿ ಅಧ್ಯಕ್ಷ ವಿಘ್ನೇಶ್ವರ ಗೌಡ, ಕಾಸರಕೋಡ ಭಾಗದ ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ ಮಲ್ಲಪ್ಪ, ಕಳಸನಮೋಟೆ ನಂ.2ರ ಮುಖ್ಯಾಧ್ಯಾಪಕ ವಿನೋದ ಮಡಿವಾಳ ಹಾಜರಿದ್ದರು.

    ಕಾರ್ಯಕ್ರಮದಲ್ಲಿ ಕೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ.ನಾಯ್ಕ, ದಾನಿ ಮಂಜು ಗೌಡ ಅವರುಗಳನ್ನು ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕ ಕೆ.ಎಂ.ಹೆಗಡೆ ಸ್ವಾಗತಿಸಿದರು. ಗೌರೀಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top