• Slide
  Slide
  Slide
  previous arrow
  next arrow
 • ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ

  300x250 AD

  ಶಿರಸಿ:ನಗರದ ಐಎಂಎ ಸಭಾಂಗಣದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ(ರಿ)ಶಿರಸಿ ಇವರ ವಾರ್ಷಿಕ ಸ್ನೇಹ ಸಮ್ಮೇಳನ-2022 ಜರುಗಿತು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ಪುಲಕರ್ ವಹಿಸಿದ್ದರು. ಅತಿಥಿಗಳಾಗಿ ಪ್ರಶಾಂತ್ ನಾಯ್ಕ್, ಸದಾನಂದ ನಾಯ್ಕ್, ಸಂತೋಷ್ ನಾಯ್ಕ್ ಆಗಮಿಸಿದ್ದರು.ಸಂಘದ ಕಾರ್ಯದರ್ಶಿಯಾದ ರಮೇಶ್ ನಾಯ್ಕ್ ಮಾತನಾಡಿ ಈ ಸಂಘದಲ್ಲಿ ರಾಜ್ಯದಲ್ಲಿ ಸುಮಾರು 5000ಕ್ಕೂ ಹೆಚ್ಚು ನೋಂದಾಯಿತ ಸದಸ್ಯರು ಇದ್ದು,ಇದು 50 ವರ್ಷಕ್ಕೂ ಹಳೆಯಯದಾದ ಸಂಘಟನೆಯಾಗಿದೆ. ಪಕ್ಷಾತೀತವಾಗಿ ಸದಸ್ಯರ ಹಕ್ಕು ಮತ್ತು ಕೆಲಸದ ಭದ್ರತೆಗಾಗಿ ಹೋರಾಡುತ್ತಾ ಬಂದಿರುವ ಸಂಘಟನೆಯಾಗಿದೆ ಎಂದರು.

  300x250 AD


  ಇದೆ ಸಂಧರ್ಭದಲ್ಲಿ ಸಂಘದ ವತಿಯಿಂದ ಹಿರಿಯ ಪ್ರತಿನಿಧಿಗಳಾದ ಗಣಪತಿ ಭಾಗವತ್ ( ಮೈಕ್ರೋ ಏರೋಸ್ ಫಾರ್ಮ), ಮಧುಕರ್ ಹಳ್ಕಾರ್(ಸಿ ಚೆಮ್ ಫಾರ್ಮ), ಸತೀಶ್ ಶಹಾನೆ (ಗಿಲ್ಮನ್ ಫಾರ್ಮ), ರಾಮಚಂದ್ರ ಹೆಗಡೆ ( ಮೇಡ್ ಮಿನಾರ್ ಫಾರ್ಮ) ಇವರುಗಳನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸದಸ್ಯರು ಹಾಜರಿದ್ದರು.
  ಕಾರ್ಯಕ್ರಮದ ನಿರೂಪಣೆಯನ್ನು ಸಂತೋಷ್ ನವಿಲಗೊಣ ಹಾಗೂ ನಿತಿನ್ ಪಲೆಕರ್ ರವರು ನಡೆಸಿ ಕೊಟ್ಟರು. ಕಾರ್ಯಕ್ರಮದ ನಂತರ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.

  Share This
  300x250 AD
  300x250 AD
  300x250 AD
  Leaderboard Ad
  Back to top