Slide
Slide
Slide
previous arrow
next arrow

ವರ್ಗಾವಣೆ ಕೌನ್ಸಿಲಿಂಗ್: ಇಲ್ಲಿದೆ ಮಾಹಿತಿ

300x250 AD

ಕಾರವಾರ: ಆರೋಗ್ಯ ಇಲಾಖೆಯಲ್ಲಿ ಜೂನ್ 27 ರಿಂದ ವರ್ಗಾವಣೆಯ ಪ್ರಕ್ರಿಯೆಯು ಕೌನ್ಸಲಿಂಗ್ ಮೂಲಕ ಪ್ರಾರಂಭವಾಗಲಿದ್ದು, ಅಂತಿಮ ವರ್ಗಾವಣೆ ಪಟ್ಟಿಯಲ್ಲಿನ ಹೆಸರುಗಳನ್ನು ಆರೋಗ್ಯ (https://hfwcom.karnataka.gov.in) Transfer ವೆಬ್‌ಸೈಟ್‌ನಲ್ಲಿ ಪಟ್ಟಿಯಲ್ಲಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಕೌನ್ಸಲಿಂಗ್ ದಿನಾಂಕವನ್ನು ಕ್ರಮ ಸಂಖ್ಯೆವಾರು ಪ್ರಕಟಿಸಲಾಗಿರುತ್ತದೆ.

ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು, ಉತ್ತರ ಕನ್ನಡ,ಕಾರವಾರ ವ್ಯಾಪ್ತಿಯ ಅಧೀನ ಸಂಸ್ಥೆಗಳ ಹಾಗೂ ಕಾರವಾರ ವೈದ್ಯಕೀಯ ಸಂಸ್ಥೆಯ ಜಿಲ್ಲಾ ಭೋಧಕ ಆಸ್ಪತ್ರೆಯಲ್ಲಿಯ ಕೌನ್ಸಲಿಂಗ್ ವರ್ಗಾವಣೆಯಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳು/ಸಿಬ್ಬಂದಿಗಳು ಕೌನ್ಸಲಿಂಗ್ ಪ್ರಕ್ರಿಯೆಗೆ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಚೇರಿಯಲ್ಲಿ ಹಾಜರಿರಲು ತಿಳಿಸಿದೆ.

300x250 AD

ಬೆಳಿಗ್ಗೆ 9 ಗಂಟೆಗೆ ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದ್ದು, ಸದರಿ ಕೌನ್ಸಲಿಂಗ್‌ಗೆ ಹಾಜರಾಗುವ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಕೆ.ಜಿ.ಐ.ಡಿ ಸಂಖ್ಯೆ ಹೊಂದಿದ ವೇತನ ಪ್ರಮಾಣ ಪತ್ರ, ಆಧಾರ ಕಾರ್ಡ ಪ್ರತಿ ಹಾಗೂ ಇಲಾಖಾ ಗುರುತಿನ ಚೀಟಿಯೊಂದಿಗೆ ಮುಂಚಿತವಾಗಿ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top