ಶಿರಸಿ: ಭಾರತದ ಸವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರದ ಪರವಾನಿಗೆ ಪಡೆಯದೇ ಕಂದಾಯ ಇಲಾಖೆ ಹಸ್ತಾಂತರಿಸಿದ ಕ್ರಮವನ್ನ ಅಸಿಂಧು ಎಂದು ಘೋಷಿಸಿ ಹಸ್ತಾಂತರಿಸಿದ ಉದ್ದೇಶಕ್ಕೆ ವರ್ಗಾಯಿಸಿದ ಭೂಮಿ ಹಂಚಿಕೆ ಪರಿಶೀಲಿಸಲು ವಿಶೇಷ ತನಿಖಾ ತಂಡ ರಚಿಸಿ ಮುಂದಿನ ಒಂದು ವರ್ಷದಲ್ಲಿ ಅರಣ್ಯ ಇಲಾಖೆಗೆ ಅರಣ್ಯ ಭೂಮಿಯನ್ನು ವಹಿಸಿಕೊಡುವಂತೆ ಸುಪ್ರೀಂ ಕೊರ್ಟನ ಆದೇಶದಿಂದ ಹಂಗಾಮಿ ಮತ್ತು ೧೯೭೮ ರ ಪೂರ್ವದ ಮತ್ತು ಇನ್ನೀತರ ಉದ್ದೇಶಕ್ಕೆ ಅರಣ್ಯ ಭೂಮಿಯನ್ನ ಅವಲಂಬಿತರಾಗಿರುವ ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ, ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ ಮಸಿಹ್ ಮತ್ತು ಮೂರ್ತಿ ಕೆ. ವಿನೋದ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೊರ್ಟನ ತ್ರೀಸದಸ್ಯ ಪೀಠವು ಮೇ ೧೫ ರಂದು ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿ ಮತ್ತು ಸಂಸ್ಥೇಗೆ ಹಂಚಿಕೆ ಮಾಡಲಾದ ಮಹಾರಾಷ್ರ ಮತ್ತು ಕೇಂದ್ರ ಸರ್ಕಾರದ ಮೇಲೆ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಸಂಬಂಧಿಸಿ ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ ಮೇಲಿನಂತೆ ನಿರ್ದೇಶನ ನೀಡಿದೆ.
ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಯ ನಂತರ ಎಪ್ರೀಲ್ ೨೭, ೧೯೭೮ ರ ಪೂರ್ವ ಕರ್ನಾಟಕದಲ್ಲಿ ೧೯,೩೪೮ ಪ್ರಕರಣಗಳಿಗೆ ಸಂಬAಧಿಸಿ ೧೪,೮೪೮.೮೩ ಹೆಕ್ಟರ್ ಪ್ರದೇಶವನ್ನ ಗುರುತಿಸಿದ್ದು ಇರುತ್ತದೆ. ಅದರಂತೆ, ಸುಮಾರು ೩೦೦೦ ಕ್ಕೂ ಮಿಕ್ಕಿ ಹಂಗಾಮಿ ಲಾಗಣಿದಾರರು ವಾರ್ಷಿಕ ಗುತ್ತಿಗೆ ಹಣ ನೀಡಿ ನವೀಕರಣಗೊಳಿಸದೇ ಇರುವದು ಮತ್ತು ಕೇಂದ್ರ ಸರ್ಕಾರದ ಪರವಾನಿಗೆ ಪಡೆಯದೇ ೮೦೦೦ ಕುಟುಂಬಗಳಿಗೆ ಮಿಕ್ಕಿ ವಸತಿಗಾಗಿ ಆಶ್ರಯ ಪಟ್ಟವನ್ನು ಕಂದಾಯ ಇಲಾಖೆ ಅರಣ್ಯ ಭೂಮಿಯನ್ನು ವರ್ಗಿಕರಣ ಮಾಡಿರುವುದು ಮತ್ತು ಮಾಡುತ್ತಿರುವುದು ಸುಪ್ರೀಂ ಕೊರ್ಟನ ಮೇ,೧೫ ರ ಆದೇಶದಿಂದ ಅರಣ್ಯವಾಸಿಗಳು ಮುಂದಿನ ಕಾನೂನಾತ್ಮಕ ಸಮಸ್ಯೆಗಳ ಕುರಿತು ಆತಂಕಕ್ಕೆ ಒಳಗಾಗಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಭೂಮಿ ವೆಚ್ಚ ಭರಿಸಲು ಅವಕಾಶ:
ಅರಣ್ಯೇತರ ಚಟುವಟಿಕೆಗಳಿಗೆ ಪರಿವರ್ತಿಸಲಾದ ಭೂಮಿಯನ್ನು ಮರಳಿ ಪಡೆಯಲು ಸಾರ್ವಜನಿಕ ಹಿತಾಸಕ್ತಿಯಿಂದ ಅಂತಹ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಭೂಮಿಯ ಮೌಲ್ಯವನ್ನ ಸಂಗ್ರಹಿಸಿ ಅಂತಹ ಮೊತ್ತವನ್ನ ಅರಣ್ಯೀಕರಣ, ಪುನರ್ ಸ್ಥಾಪನೆ ಮತ್ತು ಸಂರಕ್ಷಣೆಯ ಉದ್ದೇಶಕ್ಕಾಗಿ ಬಳಸುವಂತೆ ಸುಪ್ರೀಂ ಕೊರ್ಟನ ಆದೇಶದಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.