ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸದಾಶಿವ ಜೀ ನಿಧನರಾಗಿದ್ದು, ಆ ನಿಮಿತ್ತ ಶಿರಸಿ ಬನವಾಸಿ ರಸ್ತೆಯ ಸಂಘಧಾಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಸದಾಶಿವ ಜೀ ಮೂಲತಃ ಹಾಸನ ಜಿಲ್ಲೆಯವರಾಗಿದ್ದು ದೊಡ್ಡೆ ಗೌಡ ಮತ್ತು ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿ ಚಿಕ್ಕಂದಿನಿಂದಲೇ ಸೇವಾಕಾರ್ಯ ದಲ್ಲಿ ಅಸಕ್ತರಾದ ಇವರು ತುರ್ತು ಪರಿಸ್ಥಿತಿಯಲ್ಲಿ 11 ತಿಂಗಳು ಜೈಲುವಾಸ ಸಹ ಅನುಭವಿಸಿದ್ದರು. ವಿದ್ಯಾಭ್ಯಾಸದ ನಂತರ ಪುತ್ತೂರಿನಲ್ಲಿ ಸಂಘದ ಪ್ರಚಾರಕ ಜೀವನ ಆರಂಭಿಸಿ, 40 ವರ್ಷಗಳ ಕಾಲ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. ಪ್ರಸ್ತುತ ಅಖಿಲ ಭಾರತೀಯ ಕಾರ್ಯಕಾರಣಿ ಮಂಡಳಿ ಸದಸ್ಯರಾಗಿ ,ಆರೋಗ್ಯ ಭಾರತೀಯ ಕ್ಷೇತ್ರೀಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತಿದ್ದರು.
ಆರೋಗ್ಯ ಭಾರತಿಯ ನಾಗೇಶ್ ಪತ್ತಾರ್ ಮಾತನಾಡಿ,ಅವರ ಅಗಲುವಿಕೆ ನಮಗೆಲ್ಲ ದುಖಃ ತಂದಿದೆ. ಶಿರಸಿಯಲ್ಲೂ ಶಿರಸಿ ವಿಭಾಗದ ವಿಭಾಗ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು ಎಂದರು. ಅವರ ವಿಶಿಷ್ಟ ಸೇವಾ ಕಾರ್ಯದ ಬಗ್ಗೆ ಈಶಣ್ಣ ನೀರ್ನಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯರಾದ ಸೀತಾರಾಮ ಭಟ್ಟ ಕೆರೆಕೈ, ಶ್ರೀ ಬಾಬಣ್ಣ ಹನಂತಿಕರ್ ಮತ್ತು ಅನೇಕ ಸ್ವಯಂ ಸೇವಕರು, ಆರೋಗ್ಯ ಭಾರತಿಯ ಕಾರ್ಯಕರ್ತರು ಹಾಜರಿದ್ದರು.