ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಭಾನುವಾರ ರಾಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಸೀಮೆಯ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಂತರ ಪ್ರಿಯಾಂಕಾ ಹೆಗಡೆ ಶಿರಸಿ ಇವರು ರಾಮ ಜನ್ಮ ಹರಿಕೀರ್ತನೆ ನಡೆಸಿಕೊಟ್ಟರು.
ಸಂಜೆ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು 4 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಇರುವ ಹಣತೆಯ ದೀಪೋತ್ಸವ (ರಾಮೋತ್ಸವ ) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಅಧ್ಯಕ್ಷರು ಆಡಳಿತ ಮಂಡಳಿಯ ಸದಸ್ಯರು ಮತ್ತು ಶ್ರೀ ಲಕ್ಷೀನರಸಿಂಹ ಸಂಸ್ಕೃತಿ ಸಂಪದದ ಅಧ್ಯಕ್ಷರು ಸದಸ್ಯರು ಭಜನಾ ಮಂಡಳಿಯ ಮಾತೆಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ನಂತರ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದರು.
ಶ್ರೀಮನ್ನೆಲೆಮಾವು ಮಠದಲ್ಲಿ ರಾಮೋತ್ಸವ
