ಶಿರಸಿ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನನಿಬಿಡ ಪ್ರದೇಶಗಳಾದ ಬಿಡ್ಕಿ ಬೈಲ್, ಶಿವಾಜಿ ಚೌಕ,ಸಿಪಿ ಬಜಾರ, ಬಸ್ ನಿಲ್ದಾಣ, ಡ್ರೈವರ್ ಕಟ್ಟೆ, ಕಾಯಿಪಲ್ಯೆ ಮಾರುಕಟ್ಟೆ ಸ್ಥಳಗಳಲ್ಲಿ ಸಾರ್ವಜನಿಕರ ಸಹಾಯ ಹಾಗೂ ಸಹಭಾಗಿತ್ವದಲ್ಲಿ ಒಟ್ಟು 1,70,000/- ರೂ ವೆಚ್ಚದಲ್ಲಿ ಒಟ್ಟು 11 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಎಸ್‌ಪಿ ಎಂ. ನಾರಾಯಣ್ ಉದ್ಘಾಟಿಸಿದರು.
ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ್ ಕೆ.ಎಲ್,ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ
ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ.ಬಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಶ್ವನಾಥ ಭಂಡಾರಿ,ಸದ್ದಾಂ ಹುಸೇನ್, ಹನುಮಂತ ಕಬಾಡಿ ಸಿಸಿ ಕ್ಯಾಮೇರಾ ಅಳವಡಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಹಾಗೂ ವಾಮನ ಮಾಡಗೇರಿ, ರಾಘವೇಂದ್ರ ಗೌಳಿ,ಗಜಾನನ ಸಕಲಾತಿ,ಘನಶ್ಯಾಮ ನಾಯಕ ಸೇರಿದಂತೆ ಇತರರು ಪೊಲೀಸರ ಕಾರ್ಯಕ್ಕೆ ಕೈ ಜೋಡಿಸಿ ಸಹಕಾರ ನೀಡಿದ್ದಾರೆ.