ಹೊನ್ನಾವರ : ಮಕ್ಕಳು ಇರುವಾಗಿನ ವಯಸ್ಸು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನಗಳು. ದೊಡ್ಡವರಾದ ನಂತರ ಅವು ನೆನಪುಗಳು ಮಾತ್ರ. ವಿದ್ಯಾರ್ಥಿಯಾಗಿರುವಾಗಲೇ ಉತ್ತಮವಾದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನುಡಿದರು.
ಪಟ್ಟಣದ ನ್ಯೂ ಇಂಗ್ಲೀಷ್ ಆಂಗ್ಲಮಾಧ್ಯಮ ಶಾಲೆಗೆ ಪುಣೆಯ ಕೆ.ಟಿ.ಆರ್. ಕಪ್ಲಿಂಗ್ ಸಂಸ್ಥೆಯ ಸಿ.ಎಸ್.ಆರ್. ಅನುದಾನದಲ್ಲಿ ನರ್ಸರಿ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗದ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶಾಲೆಯ ಆಡಳಿಂತ ಮಂಡಳಿ ದಾನಿಗಳನ್ನು ಸಂಪರ್ಕಿಸಿ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸುತ್ತಾರೆ. ಇದು ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವುದು. ಆಡಳಿತ ಮಂಡಳಿಯ ಇಂತಹ ಕಾರ್ಯಗಳು ನಿಸ್ವಾರ್ಥ ಸೇವೆಯಾಗಿವೆ ಎಂದು ಶ್ರೀಗಳು ನುಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಘು ಪೈ ಶಾಲೆ ನಡೆದುಬಂದ ದಾರಿ ವಿವರಿಸಿದರು. ಉಪಾಧ್ಯಕ್ಷ ನಾಗರಾಜ ಕಾಮತ ವಂದಿಸಿದರು.
ನ್ಯೂ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕರಾದ ಶಿವಾನಂದ ಪ್ರಭು, ಗಣಪತಿ ಕಾಮತ, ವೆಂಕಟೇಶ ಕಾಮತ, ಉದಯ ಪ್ರಭು, ಜೆ.ಟಿ.ಪೈ, ರಾಮಕೃಷ್ಣ ಶಾನಭಾಗ, ಶಾಲೆಯ ಮುಖ್ಯಾಧ್ಯಾಪಕಿ ಕಮಲಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.