ದಾಂಡೇಲಿ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘವಾಗಿರುವ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಅವಿರೋಧವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಉಳಿದಂತೆ 6 ಸ್ಥಾನಗಳಿಗೆ ಡಿಸೆಂಬರ್ 28ರಂದು ಮತದಾನ ನಡೆದಿತ್ತು. ಈ 6 ಸ್ಥಾನಗಳಿಗೆ ನಡೆದ ಮತದಾನದ ಮತ ಎಣಿಕೆಯು ಶುಕ್ರವಾರ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಜರುಗಿತು.
06 ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಮಾರುತಿ ಲಕ್ಷ್ಮಣ್ ಕಾಂಬ್ರೇಕರ, ಅರ್ಜುನ್ ದೇವಪ್ಪ ಮಿರಾಶಿ ಮತ್ತು ಚಂಪಣ್ಣ ಬಾಬು ಗಾವಳ್ಕರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ನಾಗೇಶ ತಿಪ್ಪಣ್ಣ ನಾಲ್ಕಾರ, ಸುಲೇಮಾನ್ ಕರೀಂ ಸಾಬ್ ಸೈಯದ್ ಮತ್ತು ವಿಠ್ಠು ಬಾಬು ತಾಟೆ ಗೆಲುವು ಸಾಧಿಸಿದರು.
ಒಟ್ಟು 12 ಸ್ಥಾನಗಳ ಪೈಕಿ 9 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು, 03 ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ. ಚುನಾವಣಾಧಿಕಾರಿಯಾಗಿ ಅಂಬೇವಾಡಿ ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ್ ಅವರು ಕರ್ತವ್ಯ ನಿರ್ವಹಿಸಿದ್ದರು.