ಜೋಯಿಡಾ : ತಾಲ್ಲೂಕಿನ ನಾಗೋಡಾ ಗ್ರಾ.ಪಂ ವ್ಯಾಪ್ತಿಯ ಸಾಂಗ್ವೆಯಲ್ಲಿ ಶ್ರೀ ಮಹಾಮಾಯ ದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಗುರುವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಿಗ್ಗಿನಿಂದಲೆ ವಿಶೇಷ ಪೂಜೆ, ಸತ್ಯನಾರಾಯಣ ಪೂಜೆ, ಹೋಮ ನಡೆದು ಮಹಾಪೂಜೆಯಾದ ಬಳಿಕ ಮಧ್ಯಾಹ್ನ ಮಹಾಪ್ರಸಾದ ವಿತರಣೆಯು ನೆರವೇರಿತು. ಜಾತ್ರೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.