ಜೋಯಿಡಾ : ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತಂತೆ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿಯವರ ನೇತೃತ್ವದಲ್ಲಿ ಜೋಯಿಡಾ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯು ಗುರುವಾರ ಜರುಗಿತು.
ಸಭೆಯಲ್ಲಿ ಈ ಬಾರಿಯ ಸಮ್ಮೇಳನವನ್ನು ತಾಲೂಕಿನ ನಂದಿಗದ್ದೆಯ ಬಯಲು ರಂಗಮಂದಿರದಲ್ಲಿ ಆಯೋಜಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಅವರು ಈ ಹಿಂದೆ ರಾಮನಗರದಲ್ಲಿ ಉತ್ತಮವಾಗಿ ಸಾಹಿತ್ಯ ಸಮ್ಮೇಳನ ನಡೆದಿದೆ. ನಾಲ್ಕನೇ ಸಮ್ಮೇಳನವನ್ನು ಸಹ ಅಷ್ಟೇ ಸಂಭ್ರಮ, ಸಡಗರದಿಂದ ಮಾಡೋಣ ಎಂದರು.
ನಂದಿಗದ್ದೆ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ ನಂದಿಗದ್ದೆಯಲ್ಲಿ ಸಾಹಿತ್ಯ ಸಮ್ಮೇಳನ ಮಾಡಲು ನಮ್ಮ ಗ್ರಾ.ಪಂ ಹಾಗೂ ಊರಿನ ಜನರ ಸಂಪೂರ್ಣ ಸಹಕಾರವಿದೆ. ಅತ್ಯುತ್ತಮವಾಗಿ ಕನ್ನಡದ ಹಬ್ಬವನ್ನು ಮಾಡೋಣ ಎಂದರು.
ಜೋಯಿಡಾ ಕ.ಸಾ ಪ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ಸದ್ಯದಲ್ಲೇ ನಿಗದಿ ಮಾಡಲಾಗುವುದು. ಉಳಿದಂತೆ ಸಮ್ಮೇಳನದ ರೂಪುರೇಷೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಜೋಯಿಡಾ ಗ್ರಾ.ಪಂ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ಕ.ಸಾ ಪ ಜಿಲ್ಲಾ ಸದಸ್ಯೆ ಸೀತಾ ದಾನಗೇರಿ, ರಾಮನಗರದ ಅಂಥೋನಿ ಜಾನ್, ಪ್ರಮುಖರಾದ ಪಪ್ಪು ಖಲೀಪಾ, ದೇವಿದಾಸ ದೇಸಾಯಿ, ಪ್ರೇಮಾನಂದ ಕಾರ್ಟೋಲಿ, ಮಂಜುನಾಥ ಭಾಗ್ವತ್, ಅಮರ ಭಾಗ್ವತ್ ಸದಾನಂದ ಉಪಾಧ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ, ಶಿಕ್ಷಕ ಮಹದೇವ ಹಳದನಕರ ಮೊದಲಾದವರು ಉಪಸ್ಥಿತರಿದ್ದರು.