ಶಿರಸಿ: ಶಿರಸಿ ತಾಲೂಕ ಮಡಿವಾಳ ಸಮಾಜ ಸಂಘದ ನಗರದ ಟಿ.ಎಸ್.ಎಸ್ ರಸ್ತೆಯ ಪಕ್ಕದಲ್ಲಿರುವ ಶ್ರೀ ಮಾಚಿದೇವ ಸಮುದಾಯಭವನ ಕಟ್ಟಡ ಉದ್ಘಾಟನೆ, ಶ್ರೀ ಮಾಚಿದೇವ ಜಯಂತಿ ಹಾಗು ಪ್ರತಿಬಾ ಪುರಸ್ಕಾರ ಮತ್ತು ಸರ್ವಸಾಧಾರಣ ಸಬೆಯು ಫೆ-1, ಶನಿವಾರದಂದು ಜರುಗಿತು.
ಈ ಕಾರ್ಯಕ್ರಮವು ಶಿಸ್ತುಬದ್ದವಾಗಿ ಹಾಗು ಅದ್ದೂರಿಯಾಗಿ ನೆರವೇರಿ ಜನರ ಪ್ರಸಂಸೆಗೊಳಗಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣೀಭೂತರಾದ, ಶಿರಸಿ ತಾಲೂಕ ಮಡಿವಾಳ ಸಮಾಜದ ಸಂಘದ ಪದಾಧಿಕಾರಿಗಳು, ಗ್ರಾಮಸಂಘಟಿಕರು, ಕಾರ್ಯಕರ್ತರು, ದಾನಿಗಳು, ಜನಪ್ರತಿನಿಧಿಗಳು ಪೋಲೀಸ್ ಇಲಾಖೆ, ಶಿರಸಿ ನಗರಸಭೆ, ತಾಲೂಕ ಆಡಳೀತ, ಸಮಾಜಕಲ್ಯಾಣ ಇಲಾಖೆ, ವಿದ್ಯುತ್ ಇಲಾಖೆ, ಶ್ರೀ ಮಾರಿಕಾಬಾ ದೇವಸ್ಥಾನ, ಸಿರಸಿ ನಗರದ ಜನತೆ, ಮಾದ್ಯಮ ಮಿತ್ರರು, ಸ್ಥಳಾವಕಾಶ ನೀಡಿದವರು, ಎಲ್ಲಾ ಸ್ರಮಿಕರು ಮತ್ತು ಪ್ರತ್ಯಕ್ಷ ಹಾಗು ಪರೀಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಸಿರಸಿ ತಾಲೂಕ ಮಡಿವಾಳ ಸಮಾಜದ ಸಂಘವು ಅಭಿನಂದನೆಯನ್ನು ಸಲ್ಲಿಸಿದೆ.