Slide
Slide
Slide
previous arrow
next arrow

ಕೋರಾರ ಜನಾಂಗದ ಮೀಸಲಾತಿಗೆ ಆಗ್ರಹಿಸಿ ಮನವಿ

300x250 AD

ಶಿರಸಿ: ಶತಮಾನಗಳಿಂದ ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗಾ ಜಿಲ್ಲೆಗಳಲ್ಲಿ ನಗರಸಭೆ , ಪುರಸಭೆ, ಪಟ್ಟಣ ಪಂಚಾಯತ ಮತ್ತು ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿಯಾಗಿ ಸಪಾಯಿ ಕರ್ಮಚಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಕೋರಾರ ಜನಾಂಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ್ದಿದ್ದು ಸಮಾಜದ ಕಟ್ಟ ಕಡೆಯ ಸಮಾಜವೆಂದು ಗುರುತಿಸಲ್ಪಡುತ್ತದೆ.

ಅವರ ಸಮಗ್ರ ಏಳಿಗೆಗಾಗಿ ಹೆಚ್ಚಿನ ಮೀಸಲಾತಿ ಅವಶ್ಯಕತೆ ಇದ್ದು ಆ ಕುರಿತು ಡಾ|| ಅಂಬೇಡ್ಕರ ಪ್ರಗತಿ ಪರ ದಲಿತ ವೇದಿಕೆ ಶಿರಸಿಯ ಪದಾಧಿಕಾರಿಗಳಾದ ಗಣಪತಿ ಮುರ್ಡೇಶ್ವರ, ಸುಭಾಸ ಮುಂಡೂರ ಮತ್ತು ಮಂಜುನಾಥ ಹೊನ್ನಾವರ ಜ.29 ರಂದು ಏಕ ಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸರವರನ್ನು ಬೆಂಗಳೂರಿನ ಅವರ ಕಛೇರಿಯಲ್ಲಿ ಭೇಟಿ ಮಾಡಿ ಕೊರಾರ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ 5% ಒಳಮೀಸಲಾತಿಯನ್ನು ನೀಡಿ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಆಗ್ರಹಿಸಿದರು.

300x250 AD
Share This
300x250 AD
300x250 AD
300x250 AD
Back to top