Slide
Slide
Slide
previous arrow
next arrow

ಶಾಸ್ತ್ರಗಳ ಅವಲೋಕನೆಯಿಂದ ಜ್ಞಾನವೃದ್ಧಿ: ಸ್ವರ್ಣವಲ್ಲೀ ಶ್ರೀಗಳು

300x250 AD

ಸ್ವರ್ಣವಲ್ಲೀ ಮಠದಲ್ಲಿ ಶಾಂಕರಸರಸ್ವತೀ ಕಾರ್ಯಕ್ರಮಕ್ಕೆ ಚಾಲನೆ

ಶಿರಸಿ: ಶಾಸ್ತ್ರಗಳನ್ನು ಪುನಃ ಪುನಃ ಅವಲೋಕನೆ ಮಾಡುವುದರಿಂದ ಜ್ಞಾನವು ವೃದ್ಧಿಯಾಗುತ್ತದೆ ಎಂದು ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಶ್ರೀಮದ್ಜಗದ್ಗುರು ಶಂಕರಾಚಾರ್ಯ‌ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಸ್ವರ್ಣವಲ್ಲೀ‌‌ ಮಠದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಶಾಂಕರಸರಸ್ವತೀ ಎಂಬ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡಿದರು. ಮೀಮಾಂಸಾ ಜೈಮಿನಿಯ ಸೂತ್ರಗಳ ಪಾರಾಯಣ, ಶಂಕರ ಭಾಷ್ಯ ಪಾರಾಯಣ, ಮೀಮಾಂಸಾ ಶ್ಲೋಕ ವಾರ್ತಿಕಗಳ ಪಾರಾಯಣವು ಪ್ರಧಾನವಾಗಿ ಈ ಏಳು ದಿನಗಳ ಕಾಲ ನಡೆಯಲಿದೆ. ಶಾಸ್ತ್ರಗಳ ಪುನಃ ಪುನಃ ಅವಲೋಕನೆಯನ್ನು ಮಾಡುತ್ತಾ ಇರಬೇಕು. ಅವಲೋಕನೆಯನ್ನು ಮಾಡಲು ಇದು ಒಂದು ಉತ್ತಮ ವೇದಿಕೆ ಎಂದರು. ಕಳೆದ ವರ್ಷ ಶ್ರೀ ಮಠದಲ್ಲಿ ಶಾಸ್ತ್ರವನ್ನು ಓದಿ ಉತ್ತೀರ್ಣರಾದವರಿಗೆ ಪುರಸ್ಕಾರ ಕಾರ್ಯಕ್ರಮವು ನಡೆಯುತ್ತದೆ. ಇನ್ನೂ ಮುಂದೆ ಶಾಸ್ತ್ರಗಳ ಚಿಂತನೆ ಪ್ರತಿ ದಿನವೂ ಮಾಡಬೇಕು, ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಬೇಕು ಎಂಬ ಕರ್ತವ್ಯವನ್ನು ನೆನಪಿಸುವುದಕ್ಕೊಸ್ಕರ ಈ ಪುರಸ್ಕಾರವನ್ನು ಕೊಡಲಾಗುತ್ತದೆ ಎಂದರು.

300x250 AD

ವೇದಾರ್ಥಗಳ ನಿರ್ಣಯಕ್ಕೋಸ್ಕರ ಶಾಸ್ತ್ರಗಳು ಹೊರಟಿವೆ. ಸರಿಯಾದ ಚಿಂತನೆ ಇದ್ದರೆ ಮಾತ್ರ ವೇದಗಳ ಅರ್ಥದ ನಿರ್ಣಯವು ಸರಿಯಾಗಿ ಆಗಲು ಸಾಧ್ಯ ಎಂದರು. ಜೀವನದುದ್ದಕ್ಕೂ ಶಾಸ್ತ್ರಗಳ ಚಿಂತನೆ ಮಾಡಲೇಬೇಕು. ಇದರ ಉತ್ತೇಜನಕ್ಕೋಸ್ಕರ ಈ ಕಾರ್ಯಕ್ರಮ ಎಂದರು. ಪ್ರತ್ಯಾಹಾರ – ಧ್ಯಾನ – ಸಮಾಧಿಯೇ ಮೊದಲಾದ ಯೋಗದ ಅಂಗಗಳನ್ನು ಇಟ್ಟುಕೊಂಡು ಯಾರು ಸಾಧನೆಯಲ್ಲಿ ತೊಡುಗುತ್ತಾರೋ ಅವರಿಗೆ ದೇವರು ಮನಸ್ಸಿನಲ್ಲಿ ಆನಂದವನ್ನು ಉಂಟುಮಾಡುತ್ತಾನೆ. ಯಾರು ಯೋಗದ ಮೂಲಕ ತನ್ನ ಮನಸ್ಸನ್ನು ತೋಡಗಿಸುತ್ತಾನೋ ಅವನ ಮನಸ್ಸು ಶುದ್ಧವಾಗುತ್ತದೆ, ಇಂದ್ರಿಯಗಳು ವಶಕ್ಕೆ ಬರುತ್ತವೆ. ಶಾಸ್ತ್ರಗಳ ಚಿಂತನೆ ನಿರಂತರವಾಗಿ ಇರಬೇಕು ಎಂದ ಶ್ರೀಗಳು, ನಿಯಮಿತವಾದ ಕಾಲದಲ್ಲಿ ಬೇರೆ ಎಲ್ಲ ವ್ಯವಹಾರಗಳನ್ನು ಬಿಟ್ಟು ಶಾಸ್ತ್ರದ ಚಿಂತನೆಯಲ್ಲಿ ತೊಡಗಿದರೆ ಬಹಳ ಅದ್ಭುತ ಪ್ರಯೋಜನಗಳು ಸಿಗುತ್ತವೆ. ಶಾಸ್ತ್ರಗಳ ಸಂರಕ್ಷಣೆ ಮತ್ತು ಅವುಗಳ ಅವಿಸ್ಮರಣೆಯೇ ಇದರ ಮುಖ್ಯ ಪ್ರಯೋಜನ ಎಂದರು.
ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನ್ನಿಧ್ಯ‌ ನೀಡಿದ್ದರು.
ವೇದಾಂತ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾದ ಡಾ. ಶಂಕರ ಭಟ್ಟ ಬಾಲಿಗದ್ದೆ ಮಾರ್ಗದರ್ಶನ ಮಾಡಿದರು. ಡಾl ವಿನಾಯಕ ಭಟ್ಟ ಗುಂಜಗೊಡ ನಿರ್ವಹಿಸಿದರು. ಶ್ರೀಮಠದ ಪಾಠಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ವಿದ್ವಾಂಸರು, ಮಾತೆಯರು ಉಪಸ್ಥಿತರಿದ್ದು ಶಾಂಕರಸ್ತೋತ್ರ ಪಠಣವನ್ನು ಮಾಡಿದರು.

Share This
300x250 AD
300x250 AD
300x250 AD
Back to top