ಹೊನ್ನಾವರ : ನಾವು ಇಂದು ಡಿಜಿಟಲ್ ಯುಗದಲ್ಲಿದ್ದೇವೆ. ಇದುವರೆಗೆ ನಾವು ಪ್ರತಿಯೊಂದಕ್ಕೂ ಅರ್ಜಿ ನೀಡಬೇಕಿತ್ತು. ಅದಾದ ನಂತರ ಇಲಾಖೆಯವರು ದಾಖಲೆಗಳನ್ನು ಹುಡುಕಿ ಅರ್ಜಿ ವಿಲೆವಾರಿ ಮಾಡುವವರೆಗೆ ವಿಳಂಬವಾಗುತ್ತಿತ್ತು. ಇನ್ನೂ ಮುಂದೆ ಆನ್ಲೈನ್ ಮೂಲಕ ದಾಖಲೆಗಳು ಸಿಗುತ್ತದೆ. ಈಗಾಗಲೇ 70% ಕಾರ್ಯ ಮುಗಿದಿದ್ದು ಇನ್ನು 6 ತಿಂಗಳೊಳಗೆ ಸಂಪೂರ್ಣವಾಗಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ. ತಮಗೆ ಬೇಕಾದ ದಾಖಲೆಗಳು ಕೂಡಲೇ ಸಿಗಬೇಕು ಹಾಗೂ ಹಳೆಯ ದಾಖಲೆಗಳು ಸುರಕ್ಷಿತವಾಗಿಡಬೇಕು ಎನ್ನುವ ಉದ್ದೇಶದಿಂದ ಭೂ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವ ಮಂಕಾಳ್ ವೈದ್ಯ ಹೇಳಿದರು.
ಅವರು ಸರಕಾರದ “ಭೂ ಸುರಕ್ಷಾ” ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ತಹಶಿಲ್ದಾರ ಪ್ರವೀಣ ಕರಾಂಡೆ, ಗ್ರೇಡ್-2 ತಹಶಿಲ್ದಾರರಾದ ಉಷಾ ಪಾವಸ್ಕರ್, ಅಭಿಲೇಖನಾಯಲದ ಮುಖ್ಯಸ್ಥರಾದ ರಾಜು ನಾಯ್ಕ, ಶಿರಸ್ತೆದಾರರಾದ ಅಖಿಲಾ ಖಾನ್, ಕೃಷ್ಣ ಗೊಂಡ, ಜ್ಯೋತಿ ಶಡಗೇರಿ, ಆಹಾರ ಶಿರಸ್ತೆದಾರ ವೆಂಕಟ್ರಮಣ ಹಳದೀಪುರ, ಉಪ ತಹಶಿಲ್ದಾರ ಮಹೇಶ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷೆ ವೈಭವಿ ಭಂಡಾರಿ, ಗೌರವಾಧ್ಯಕ್ಷರಾದ ಮಹೇಂದ್ರ ಗೌಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು