ಭಟ್ಕಳ: ಡಿ. 31ರಂದು ಇಲ್ಲಿನ ಅಳಿವೆಕೋಡಿಯಲ್ಲಿ ನಡೆಯಲಿರುವ ಭಟ್ಕಳ ತಾಲೂಕಾ 11ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ನಾರಾಯಣ ಯಾಜಿ ಶಿರಾಲಿ ಆಯ್ಕೆಯಾಗಿದ್ದಾರೆ.
ನಾರಾಯಣ ಯಾಜಿ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು,ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ,ಕರ್ನಾಟಕ ವಿ.ವಿ.ಯಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿ, ಶಿವಮೊಗ್ಗ ದ ಕುವೆಂಪು ವಿವಿ ಯಿಂದ ಸ್ನಾತಕೋತ್ತರ ಕಾನೂನು ಪದವಿ ಪಡೆದಿದ್ದಾರೆ. ಶಿರಾಲಿಯ ಗೊಂಡರು ಎಂಬ ಜನಾಂಗಿಯ ಅಧ್ಯಯನ ಕ್ರತಿ, ಸಹಕಾರ ಕವನ ಸಂಕಲನ, ಶತಕದ ಸಂಭ್ರಮದಲ್ಲಿ ಭಾರತದ ಸಹಕಾರ ಕ್ಷೇತ್ರ ಮತ್ತು ನಾನೇಕೆ ಬರೆಯುತ್ತೇನೆ, ನಿವೃತ್ತಿಯ ನಂತರ ಎಂಬ ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಇವರ ಚಿಂತನಗಳು ಭದ್ರಾವತಿ ಮತ್ತು ಕಾರವಾರ ಆಕಾಶವಾಣಿಯಿಂದ ಬಿತ್ತರಗೊಂದಿವೆ. ಇವರ ಸಣ್ಣಕತೆ, ಲೇಖನಗಳು, ಕವನಗಳು ನವಭಾರತ ಉದಯವಾಣಿ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.