ಭಟ್ಕಳ: ವಾಹನ ಪರವಾನಿಗೆ ದಾಖಲೆ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ದ್ವಿಚಕ್ರ ವಾಹನ ಚಾಲಕನಿಗೆ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯವು ಬುಧವಾರದಂದು 28 ಸಾವಿರ ದಂಡ ವಿಧಿಸುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ನವೆಂಬರ 30 ರಂದು ತಾಲೂಕಿನ ನ್ಯೂ ಇಂಗ್ಲೀಷ್ ಶಾಲೆಯ ಸಮೀಪ ಭಟ್ಕಳ ನಗರ ಠಾಣೆಯ ಪಿ.ಎಸ್.ಐ. ನವೀನ ನಾಯ್ಕ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಬಂದರ ಕಡೆಗೆ ವ್ಯಕ್ತಿಯೋರ್ವ ತನ್ನ ಸ್ಕೂಟರ್ ನಂಬರ KA 47 EA 0076 ನೇದನ್ನು ಚಲಾಯಿಸಿಕೊಂಡು ಬರುವ ವೇಳೆ ಪರಿಶೀಲಿಸಿ ನೋಡಿದಾಗ ಚಾಲಕನು ಮದ್ಯ ಸೇವನೆ ಮಾಡಿದ ಬಗ್ಗೆ ದೃಡಪಟ್ಟಂತೆ ಈತನ ವ ಮೇಲೆ (1)ಮಧ್ಯ ಸೇವನೆ ಮಾಡಿ ವಾಹನ ಚಾಲನೆ. (2) ಚಾಲನಾ ಪ್ರಮಾಣ ಪತ್ರ ಹೊಂದದೇ ಇದ್ದದ್ದು (3) ಅಪಾಯಕಾರಿ ಚಾಲನೆ (4) ಹೆಲ್ಮೆಟ್ ಧರಿಸದೇ ಇರುವುದು (5) ಹೊಗೆ ಪ್ರಮಾಣ ಪತ್ರ ಇಲ್ಲ (6) ವಾಹನದ ಇನ್ಸುರೆನ್ಸ್ ಮಾಡಿಸದೆ (7) ಮತ್ತು ವಾಹನ ನೊಂದಣಿ ಮಾಡಿಸದ ಬಗ್ಗೆ ಕಂಡು ಬಂದ ಕಾರಣ ಸದರಿ ವಾಹನ ಚಾಲಕನ ವಿರುದ್ಧ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೇ.ಎಂ.ಎಫ್.ಸಿ ನ್ಯಾಯಾಲಯ ಭಟ್ಕಳ ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ಅಂತಿಮ ವರದಿ ಸಲ್ಲಿಸಿದ ಮೇರೆಗೆ ಪ್ರಕರಣದ ವಿಚಾರಣೆ ಕೈಗೊಂಡು ತಪ್ಪಿತಸ್ಥ ಚಾಲಕನಿಗೆ ಬುಧವಾರ 28,000 ದಂಡ ವಿಧಿಸಿ ಪ್ರಕರಣ ಮುಕ್ತಾಯ ಗೊಳಿಸಿದೆ.