ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ 2024-25ರಲ್ಲಿ ನಡೆಸಿದ ಜಿಲ್ಲಾಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ನಾಟಕದಲ್ಲಿ ಕುಮಾರಿ ಪೃಥ್ವಿ ಹೆಗಡೆ, ಸಾತ್ವಿಕ್ ಭಟ್, ದಿಗಂತ್ ಭಟ್, ಶರತ್ ಎಸ್.ಎಂ, ಎನ್. ಶರತ್ ಪ್ರಥಮ ಸ್ಥಾನ, ಕುಮಾರ ಧ್ರುವ ಗುಡಿಗಾರ್ ದೃಶ್ಯ ಕಲೆ ಪ್ರಥಮ, ಕುಮಾರಿ ಸಹನಾ ಭಟ್ ಗಾಯನ ಸಂಗೀತ ತೃತೀಯ, ಸಿಂಚನ ಶೆಟ್ಟಿ ವಾದ್ಯ ಸಂಗೀತ ನಾಲ್ಕನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ವಿದ್ಯಾರ್ಥಿಗಳಿಗೆ ಶ್ರೀಮತಿ ಮುಕ್ತಾ ನಾಯ್ಕ ತರಬೇತಿ ನೀಡಿರುತ್ತಾರೆ. ವಿನಾಯಕ್ ನಾಯ್ಕ ತಾಂತ್ರಿಕ ಸಹಾಯ ನೀಡಿರುತ್ತಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶೈಕ್ಷಣಿಕ ಮುಖ್ಯಸ್ಥರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು ಸಾಧಕ ವಿದ್ಯಾರ್ಥಿಗಳನ್ನು, ಪಾಲಕರನ್ನು, ಮಾರ್ಗದರ್ಶಕ ಶಿಕ್ಷಕರನ್ನು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿರುತ್ತಾರೆ.