Slide
Slide
Slide
previous arrow
next arrow

ಸಾರಿಗೆ ಬಸ್ ವಿಳಂಬ : ವಿದ್ಯಾರ್ಥಿಗಳಿಂದ ಪ್ರತಿಭಟನೆ

300x250 AD

ದಾಂಡೇಲಿ : ಬೆಳಿಗ್ಗೆ 8:30ಕ್ಕೆ ತಾಲೂಕಿನ ಅಂಬಿಕಾನಗರಕ್ಕೆ ಬರಬೇಕಾಗಿದ್ದ ಬೆಂಗಳೂರು -ದಾಂಡೇಲಿ ಸಾರಿಗೆ ಬಸ್ 9:45 ನಿಮಿಷವಾದರೂ ಬರದೇ ಇರುವುದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿ ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

ದಾಂಡೇಲಿ ಸಾರಿಗೆ ಘಟಕದ ಬೆಂಗಳೂರು – ದಾಂಡೇಲಿ ಸಾರಿಗೆ ಬಸ್ ಪ್ರತಿದಿನ ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಅಂಬಿಕಾನಗರಕ್ಕೆ ಬರುತ್ತಿತ್ತು. ಅಂಬಿಕಾನಗರ ಹಾಗೂ ಸುತ್ತಮುತ್ತಲ ಕಡೆಯ ವಿದ್ಯಾರ್ಥಿಗಳಿಗೆ ಶಾಲೆ / ಕಾಲೇಜುಗಳಿಗೆ ದಾಂಡೇಲಿಗೆ ಬರಲು ಈ ಬಸ್ ಅನುಕೂಲಕರವಾಗಿದೆ. ಆದರೆ ಇತ್ತೀಚಿನ ಕೆಲ ದಿನಗಳಿಂದ ಬೆಳಿಗ್ಗೆ 8:30 ಗಂಟೆಗೆ ಅಂಬಿಕಾನಗರಕ್ಕೆ ಬರಬೇಕಾಗಿದ್ದ ಈ ಬಸ್ 9.45 ನಿಮಿಷವಾದರೂ ಬರದೇ ಇರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆ -ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಗುರುವಾರವು ಕೂಡ ತಡವಾಗಿ ಬಸ್ ಬಂದಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಅಂಬಿಕಾನಗರದಿಂದ ಅದೇ ಬಸ್ಸಿನಲ್ಲಿ ದಾಂಡೇಲಿಗೆ ಬಂದು ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ವಿದ್ಯಾರ್ಥಿಗಳ ಪ್ರತಿಭಟನೆಯ ವಿಚಾರ ತಿಳಿದು ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

300x250 AD

ಬೆಂಗಳೂರು – ಧಾರವಾಡ ರಸ್ತೆ ದುರಸ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಬಸ್ ಬರಲು ತೊಂದರೆಯಾಗುತ್ತಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಿಟಿ ಬಸ್ಸನ್ನಾದರೂ ಒದಗಿಸಿ ಕೊಡಬೇಕೆಂದು ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಸಾರಿಗೆ ನಿಯಂತ್ರಕರು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ವಿದ್ಯಾರ್ಥಿಗಳಿಗೆ ಭರವಸೆಯನ್ನು ನೀಡಿದರು.

Share This
300x250 AD
300x250 AD
300x250 AD
Back to top