Slide
Slide
Slide
previous arrow
next arrow

ಕಸ್ತೂರಿರಂಗನ್ ವರದಿ ವಿರೋಧಿ ನಿಲುವು ಅಚಲ

300x250 AD

ಬೆಂಗಳೂರಿನಲ್ಲಿ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನ: ಅರಣ್ಯ ಭೂಮಿ ಹಕ್ಕಿಗೆ ಬದ್ಧ

ಶಿರಸಿ: ಕಸ್ತೂರಿರಂಗನ್ ವಿರೋಧಿಸಿ ಮತ್ತು ಅರಣ್ಯ ಹಕ್ಕುದೊಂದಿಗೆ ೬ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ರಾಜ್ಯಾದಂತ ೧೬ ಜಿಲ್ಲೆಗಳೊಂದಿಗೆ ವಿಶಿಷ್ಟ ಕಲಾ ತಂಡದೊಂದಿಗೆ ಹಾಗೂ ಕರ್ನಾಟಕದ ಹಿರಿಯ ಸಚಿವರು ಭಾಗವಹಿಸಿ ಸರ್ಕಾರದ ನಿರ್ದಿಷ್ಟ ಅರಣ್ಯವಾಸಿಗಳ ಪರ ಘೋಷಣೆಯೊಂದಿಗೆ ಬೆಂಗಳೂರು ಚಲೋ ಕಾರ್ಯಕ್ರಮ ಯಶಸ್ವಿಯಾದವು. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು.

ಬೆಂಗಳೂರಿನಲ್ಲಿ ಜರುಗಿದ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಮತ್ತು ಕಾನೂನು ತಜ್ಞರು ಕಸ್ತೂರಿರಂಗನ್ ವಿರೋಧ ನಿಲುವು ಅಚಲ ಮತ್ತು ಅರಣ್ಯ ಭೂಮಿ ಹಕ್ಕು ನೀಡಲು ಬದ್ಧರೆಂದು ವ್ಯಾಖ್ಯಾನಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡುತ್ತಾ ಕಸ್ತೂರಿರಂಗನ್ ವರದಿ ಹೋರಾಟದೊಂದಿಗೆ ರಾಜ್ಯ ಸರ್ಕಾರವು ಸಹಕರಿಸುತ್ತದೆ. ಜನ ವಿರೋಧಿ ಕಸ್ತೂರಿರಂಗನ್ ವರದಿ ಜಾರಿಯಾಗಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಕಾನೂನು ಭಾಹಿರವಾಗಿ ಒಕ್ಕಲೆಬ್ಬಿಸುವ ಕಾನೂನು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಭೂಕಬಳಿಕೆ ನಿಷೇಧ ಕಾಯಿದೆ ಕಾನೂನಿಗೆ ವ್ಯತಿರಿಕ್ತವಾಗಿ ಜೀವನಕ್ಕೆ ಅತಿಕ್ರಮಣಿಸಿದವರು ಮೇಲೂ ಕ್ರಮ ಜರುಗಿಸುತ್ತಿರುವುದು ನಿಯಂತ್ರಿಸಲಾಗುವುದೆಂದು ಹೇಳಿದರು.

ಅರಣ್ಯ ಹಕ್ಕು ಕಾಯಿದೆಯಲ್ಲಿ ದಾಖಲೆಗೆ ಸಂಬಂಧಿಸಿದ ಕಾನೂನಾತ್ಮಕ ಅಂಶಗಳ ಕುರಿತು ಅರಣ್ಯವಾಸಿಗಳ ಪರ ಸರ್ಕಾರ ನಿಲುವನ್ನ ಪ್ರಕಟಿಸಿರುವುದೆಂದು ಹೇಳಿದರು. ಅರಣ್ಯವಾಸಿಗಳಿಗೆ ನಿರಾಶ್ರಿತರಾಗಲು ಅವಕಾಶ ನೀಡ ಎಂದು ಅವರು ಹೇಳಿದರು.

ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಮಾತನಾಡುತ್ತಾ ಜನಪರ ನಿಲುವಿಗೆ ಸರ್ಕಾರ ಬದ್ಧರಾಗಿರಬೇಕು ಈಗಿರುವ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ಭೂಮಿ ಹಕ್ಕು ನೀಡಬಹುದಾದ ಆದರೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಅವಶ್ಯ ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ ಮಹಾದೇವಪ್ಪ ಮಾತನಾಡುತ್ತಾ ಮಂಜೂರಿಗೆ ಸಂಬಂಧಿಸಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕಾನೂನು ಸಮಸ್ಯೆಗಳ ಕುರಿತು ಕಾನೂನು ತಜ್ಞರು ಉನ್ನತ ಮಟ್ಟದ ವಿಶೇಷ ಸಭೆ ಜರುಗಿಸಲಾಗುವದು ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅರಣ್ಯವಾಸಿಗಳ ಪರ ಇರುವರೆಂದು ಅವರು ಹೇಳಿದರು.

300x250 AD

ಕರ್ನಾಟಕ ವಿಧಾನ ಉಪಾ ಸಭಾಪತಿ ರುದ್ರಪ್ಪ ಲಮಾಣಿಯವರು ಮುಂದಿನ ಒಂದು ವರ್ಷಗಳಲ್ಲಿ ಅರಣ್ಯ ಭೂಮಿ ಹಕ್ಕಿಗೆ ಕ್ರಮ ಜರುಗಿಸಲಾಗುವದು. ಸಂಬಂಧಿಸಿ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದೆಂದು ಹೇಳಿದರು.

ಬೇಡಿಕೆಗಳು:

ಕರಡು ಕಸ್ತೂರಿರಂಗನ್ ವರದಿಯನ್ನ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕು, ನಿರ್ದಿಷ್ಟ ಅರಣ್ಯ ಹಕ್ಕು ಕಾಯಿದೆ, ಬುಡಕಟ್ಟು ಮಂತ್ರಾಲಯ ಹಕ್ಕು ನ್ಯೂ ಡೆಲ್ಲಿ ಮತ್ತು ಗುಜರಾತ್ ಉಚ್ಛ ನ್ಯಾಯಾಲಯದ ಆದೇಶದಂತೆ ಮೂರು ತಲೆಮಾರಿನ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ, ೨೭-೪-೧೯೭೮ ರ ಪೂರ್ವದ ಅರಣ್ಯ ಮಂಜೂರಿಗೆ ಕೇಂದ್ರ ಸರ್ಕಾರ ಅನುಮತಿ ನೀಡದ ರಾಜ್ಯದಲ್ಲಿನ – ಪ್ರಕರಣಗಳ ಅರಣ್ಯವಾಸಿಗಳ ಕುಟುಂಬಕ್ಕೆ ಶೀಘ್ರದಲ್ಲಿ ಹಕ್ಕು ಪತ್ರ ವಿತರಿಸುವುದು, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಪೀಲೆಗೆ, ಮಾನ್ಯತೆ ನೀಡುವುದು, ಕರ್ನಾಟಕದಲ್ಲಿ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳೊಳಗೊಂಡ ಉತ್ತರ ಕನ್ನಡ ಜಿಲ್ಲೆಯು ಸೇರಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ವಂಚಿತರಾದ ಅರಣ್ಯವಾಸಿಗಳ ಕುಟುಂಬಕ್ಕೆ ಪುನಃ ಅರ್ಜಿ ಸಲ್ಲಿಸುವ ಅವಕಾಶ ನೀಡುವುದು,ಅರಣ್ಯವಾಸಿಗಳ ಮೇಲೆ ಕಾನೂನು ಭಾಹಿರವಾಗಿ ಒಕ್ಕಲೇಬ್ಬೀಸುವ ಮತ್ತು ದೌಜನ್ಯ ಎಸಗುವ ಕ್ರಮವನ್ನ ನಿಯಂತ್ರಿಸುವುದು.

೧೦ ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು:

ರಾಜ್ಯದಿಂದ ಭೂಮಿ ಹಕ್ಕಿಗೆ ಸಂಬಂಧಿಸಿ ೨೦ ಕ್ಕೂ ಮಿಕ್ಕಿ ರಾಮು ಕೊಡುಗ, ಚಿಕ್ಕಣ್ಣ ಎಚ್.ಡಿ.ಕೋಟೆ, ಶಂಕರ ಡಂಮಾಣಿ ಗದಗ, ಪ್ರಕಾಶ ರಾಥೋಡ್ ಬಿಜಾಪುರ, ರಮಾನಂದ ನಾಯ್ಕ ಅಚವೆ ಬೀಮಶಿ ವಾಲ್ಮೀಕಿ, ಚಂದ್ರ ನಾಯ್ಕ ಬೆಳಕೆ, ಮಾಬ್ಲೆಶ್ವರ ನಾಯ್ಕ ಬೇಡ್ಕಣಿ, ವಿನಾಯಕ ಮರಾಠಿ, ನೆಹರು ನಾಯ್ಕ, ಚಂದ್ರು ಶಾನಭಾಗ, ಶಿವಾನಂದ ಜೋಗಿ, ರಾಮು ಮರಾಠಿ ಮುಂತಾದವರು ನೇತೃತ್ವದಲ್ಲಿ ರಾಜ್ಯಾದ್ಯಂತ ೧೦ ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಮ್. ರೇವಣ್ಣ ಉಪಸ್ಥಿತರಿದ್ದರು. ಸಭೆಯನ್ನುದ್ದೇಶಿಸಿ ಮಾನವ ಬಂಧು ವೇದಿಕೆಯ ಸಂಚಾಲಕ ಅನಂತ ನಾಯ್ಕ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಸ್ತಾವನೆ ರಾಜ್ಯಾದ್ಯಕ್ಯರ ರವೀಂದ್ರ ನಾಯ್ಕ ಮಾಡಿದರು. ಹಿರಿಯ ಸಾಮಾಜಿಕ ಹೋರಾಟಗಾರರ ಬರಮಣ್ಣ ವಂದಿಸಿದರು.

Share This
300x250 AD
300x250 AD
300x250 AD
Back to top