Slide
Slide
Slide
previous arrow
next arrow

ನ.26ರಿಂದ ‘ಕಾವಿಕಲೆ ತರಬೇತಿ ಕಾರ್ಯಾಗಾರ’

300x250 AD

ಶಿರಸಿ: ಇಲ್ಲಿನ ಎಮ್ಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನವೆಂಬರ್ 26 ರಿಂದ 29 ವರೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಕಾರದಲ್ಲಿ ‘ಕಾವಿಕಲೆ’ ತರಬೇತಿ ಕಾರ್ಯಾಗಾರ’ವನ್ನು ಆಯೋಜಿಸಲಾಗಿದೆ.

ನ.26ರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸಲಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಮ್ಇಎಸ್ ಅಧ್ಯಕ್ಷ ಜಿ.ಎಮ್.ಹೆಗಡೆ ಮುಳಖಂಡ, ಉಪಸಮಿತಿ ಅಧ್ಯಕ್ಷ ಎಸ್‌.ಕೆ.ಭಾಗ್ವತ್ ಆಗಮಿಸಲಿದ್ದಾರೆ. ಪ್ರಾಚಾರ್ಯ ಜಿ.ಟಿ.ಭಟ್, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಗಲಾ ವೆಂ.ನಾಯ್ಕ್ ಉಪಸ್ಥಿತರಿರಲಿದ್ದಾರೆ.

ನ.27ರ ಸಂಜೆ 5 ಗಂಟೆಗೆ ‘ಭಾರತೀಯ ಸಂಸ್ಕೃತಿಯಲ್ಲಿ ಕಾವಿಕಲೆ’ ವಿಷಯ ಕುರಿತು ಹಿರಿಯ ಕಲಾವಿದ ಮನೋಜ್ ಪಾಲೇಕರ್ ಉಪನ್ಯಾಸ ನೀಡಲಿದ್ದು, ಕಲಾವಿದ ಜಿ.ಎಮ್.ಬೊಮ್ನಳ್ಳಿ, ವಿಭವ ಮಂಗಳೂರು ಉಪಸ್ಥಿತರಿರಲಿದ್ದಾರೆ. ನ.28ರ ಸಂಜೆ ಪ್ರಕಾಶ್ ಜಿ.ನಾಯಕ್ ಪ್ರಾತ್ಯಕ್ಷಿಕೆ ನೀಡಲಿದ್ದು, ಸಂರಕ್ಷಣಾ ಜೀವಶಾಸ್ತ್ರಜ್ಞ ಕೇಶವ್ ಎಚ್ ಕೊರ್ಸೆ, ಕಲಾಶಿಕ್ಷಕಿ ಮಂಗಲಾ ಭಟ್, ಕಲಾವಿದ ಸತೀಶ್ ಎಲೆಸರ, ಅನುಷಾ ವಿ.ಜೋಷಿ ಉಪಸ್ಥಿತರಿರಲಿದ್ದಾರೆ.

300x250 AD

ನ.29ಕ್ಕೆ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಾಂಶುಪಾಲ ಜಿ.ಟಿ.ಭಟ್ ಸಮಾರೋಪ ನುಡಿ ನುಡಿಯಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಚಾರ್ಯ ಡಾ.ಕೃಷ್ಣಮೂರ್ತಿ ಭಟ್, ಸುಭಾಷ್ ಕಾನಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಲಾವಿದ ಜಿ.ಎಮ್. ಹೆಗಡೆ ತಾರಗೋಡ, ನೀರ್ನಳ್ಳಿ ಗಣಪತಿ, ವೆಂಕಟಾಚಲ ಮರಾಠೆ, ಸಂಪನ್ಮೂಲ ವ್ಯಕ್ತಿಗಳಾಗಿ ರವಿ ಗುನಗಾ ಉಪಸ್ಥಿತರಿರಲಿದ್ದಾರೆ.ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ಅಪರೂಪದ ಸಾಂಪ್ರದಾಯಿಕ ಕಲಾ ಪ್ರಕಾರವಾದ ‘ಕಾವಿಕಲೆ’ ಕಲಿಯುವ ಆಸಕ್ತರಿಗೆ ಉಪಯುಕ್ತವಾಗಿದೆ.

Share This
300x250 AD
300x250 AD
300x250 AD
Back to top