Slide
Slide
Slide
previous arrow
next arrow

33 ವರ್ಷ ಹೋರಾಟದ ಸಾರ್ಥಕತೆಗೆ ಸರ್ವ ಪ್ರಯತ್ನ ಅಗತ್ಯ: ರವೀಂದ್ರ ನಾಯ್ಕ

300x250 AD

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ ೩೩ ವರ್ಷ ಹೋರಾಟದ ಸಾರ್ಥಕತೆಗೆ ಎಲ್ಲರು ಸಹಕಾರ, ಮತ್ತು ಪ್ರಯತ್ನ ಅಗತ್ಯ. ಇಲ್ಲದಿದ್ದರೇ ಅರಣ್ಯವಾಸಿಗಳು ಅತಂತ್ರರಾಗುವರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

      ಅವರು ಸ್ಥಳಿಯ ಹೋರಾಟಗಾರರ ವೇದಿಕೆಯ ಕಾರ್ಯಾಯಲದಲ್ಲಿ ನ.೭ ರ ಬೆಂಗಳೂರು ಚಲೋ ಕಾರ‍್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.

      ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಶೇ. ೨ ರಷ್ಟು ಅರ್ಜಿಗೆ ಮಾತ್ರ ಹಕ್ಕು ಪತ್ರ ದೊರಕ್ಕಿದ್ದು  ಶೇ. ೭೩ ರಷ್ಟು ಅರ್ಜಿಗಳು ಪ್ರಥಮ ಹಂತದಲ್ಲಿ ತಿರಸ್ಕರಿಸಲಾಗಿದೆ.  ಈ ಹಿನ್ನಲೆಯಲ್ಲಿ ೩೩ ವರ್ಷದಿಂದ ಹೋರಾಟಕ್ಕೆ ಜರುಗುತ್ತಿದ್ದರು. ನ್ಯಾಯ ಸಿಗದೇ ಇರುವುದು ವಿಷಾದಕಾರ. ಇಂದು ಹೋರಾಟವು ತಾರ್ತಿಕ ಹಂತಕ್ಕೆ ತಲುಪಿದ್ದು ಈ ಹಂತದಲ್ಲಿ ಸರ್ಕಾರದ ಇಚ್ಚಾಶಕ್ತಿ ಪ್ರದರ್ಶೀಸಬೇಕೆಂದು ಅವರು ಹೇಳಿದರು.

300x250 AD

     ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ನೆಹರು ನಾಯ್ಕ ಬಿಳೂರು, ನಾಗರಾಜ ಎಸ್ ದೇವಸ್ಥಳ ಅಚನಳ್ಳಿ, ರಾಜು ನರೇಬೈಲ್, ಇಬ್ರಾಹೀಂ ಗೌಡಳ್ಳಿ, ಎಮ್.ಆರ್. ನಾಯ್ಕ ಕಂಡ್ರಾಜಿ,  ಮಲ್ಲೇಶಿ ಬದನಗೋಡ, ಸ್ವಾತಿ ಜೈನ್, ಚಂದ್ರಶೇಖರ ಶಾನಭಾಗ ಬಂಡಲ ಮುಂತಾದವರು ಸಭೆಯಲ್ಲಿ ಮಾತನಾಡಿದ್ದರು.

೬೦೦೦ ಸಾವಿರ ಮೇಲ್ಮವವಿ:
    ಅಸಮರ್ಪಕ ಜಿ.ಪಿ,ಎಸ್ ಮೇಲ್ಮನವಿ ಅಭಿಯಾನದ ಅಡಿಯಲ್ಲಿ ಶಿರಸಿ ತಾಲೂಕಿನಲ್ಲಿ ೬೦೦೦ ಸಾವಿರಕ್ಕೂ ಮಿಕ್ಕಿ ಉಚಿತವಾಗಿ ಜಿಪಿ.ಎಸ್ ಮೇಲ್ಮನವಿ ಕಾರ್ಯ ಜರುಗಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ  ಹೇಳಿದರು.

Share This
300x250 AD
300x250 AD
300x250 AD
Back to top