Slide
Slide
Slide
previous arrow
next arrow

ಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ‘ಕೃಷ್ಣ ಭಾಗ್ವತ’

300x250 AD
  • ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ: ಕಳೆದ 17-18 ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಹೆಮ್ಮೆಯ ಕಲಾಪುತ್ರ ಕೃಷ್ಣ ಭಾಗ್ವತ.

ಕಲಾ ಸೇವೆಗಾಗಿಯೇ ಜನ್ಮ ಪಡೆದಂತಿರುವ ಕೃಷ್ಣ ಭಾಗವತ ಅವರು ಕಳೆದ 17 -18 ವರ್ಷಗಳಿಂದ ನಿರಂತರವಾಗಿ ಭರತನಾಟ್ಯ ಗುರುಗಳಾಗಿ ಅಸಂಖ್ಯಾತ ಮಕ್ಕಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಭರತನಾಟ್ಯ ಕಲಿಕೆಯ ಜೊತೆ ಜೊತೆಗೆ ಮಕ್ಕಳಿಗೆ ಆದರ್ಶ ಸಂಸ್ಕಾರ ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳಲು ಸದಾ ಪ್ರೇರಣಾದಾಯಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಕೃಷ್ಣ ಭಾಗವತ ಅವರ ಗರಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕಲೆಯನ್ನೇ ಉಸಿರಾಗಿಸಿಕೊಂಡ ಕೃಷ್ಣ ಭಾಗವತ ಅವರು ಗುರುಗಳಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಗರದ ಸಂಸ್ಕಾರ ಸಹಕಾರ ಭಾರತಿ ಕಲಾ ಕೇಂದ್ರ, ಶ್ರೀ ಶಂಕರ ಮಠದ ವಿದ್ಯಾರ್ಥಿಗಳಿಂದ ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ಸಮೂಹ ಭರತನಾಟ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

300x250 AD

ದಾಂಡೇಲಿಯ ಮಕ್ಕಳ ಪಾಲಿಗೆ ಮೆಚ್ಚಿನ ಹಾಗೂ ವಾತ್ಸಲ್ಯದ ಗುರುಗಳಾಗಿರುವ ಕೃಷ್ಣ ಭಾಗವತ ಅವರ ಕಲಾಸೇವೆ ಅನುಕರಣೀಯ ಮತ್ತು ಅಭಿನಂದನೀಯ.

Share This
300x250 AD
300x250 AD
300x250 AD
Back to top