Slide
Slide
Slide
previous arrow
next arrow

ನವರಾತ್ರಿ ಉತ್ಸವದಲ್ಲಿ ಪೂಜೆ ನೆರವೇರಿಸಿದ ದಶರಥ ದಂಪತಿ

300x250 AD

ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಹಳೆ ನಗರಸಭೆ ಮೈದಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 6ನೇ ದಿನವಾದ ಮಂಗಳವಾರ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮ ಜರುಗಿತು.

ಗಿರಿಧರ್ ಭಟ್ ಪೌರೋಹಿತ್ಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ದಶರಥ ಬಂಡಿವಡ್ಡರ ಹಾಗೂ ಅವರ ಪತ್ನಿ ವೀಣಾ ದಶರಥ ಮತ್ತು ಕುಟುಂಬಸ್ಥರು ಪೂಜಾ ಕಾರ್ಯಕ್ರಮದ ಸೇವಾಕರ್ತೃಗಳಾಗಿದ್ದರು.

300x250 AD

ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸುನೀಲ ಹೆಗಡೆ, ಅಧ್ಯಕ್ಷರಾದ ಟಿ. ಎಸ್.ಬಾಲಮಣಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌವ್ಹಾಣ್, ಖಜಾಂಚಿ ಅಶುತೋಷ ಕುಮಾರ್ ರಾಯ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top