ಶಿರಸಿ: ಮುಖ್ಯಮಂತ್ರಿಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣದೊಂದಿಗೆ ವಿಚಾರಣೆ ಸಂಬಂಧಿಸಿ ರಾಜ್ಯಪಾಲರು ಕಾನೂನು ಪ್ರಕ್ರಿಯೆ ಮೀರಿ ಕೇಂದ್ರ ಸರಕಾರದ ರಾಜಕೀಯ ಒತ್ತಡದ ಹಿನ್ನಲೆಯ ಆತುರದ ಕ್ರಮವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಶಿರಸಿಯಲ್ಲಿ ಜಿಲ್ಲೆ ಕಾಂಗ್ರೇಸ್ ಸಮಿತಿಯ ಕಾರ್ಯಾಲಯದಲ್ಲಿ ಜಾಗೃತ ವಕೀಲರ ವೇದಿಕೆ, ಬೆಂಗಳೂರು ಅವರು ಪ್ರಕಟಿಸಿದ ‘ಮುಡಾ ಪ್ರಕರಣ ಕೋರ್ಟುಗಳ ಆದೇಶ ಸತ್ಯಾಸತ್ಯತೆ’ ಎಂಬ ಪುಸ್ತಕ ಪ್ರರ್ದಶಿಸಿ ಮಾತನಾಡುತ್ತಿದ್ದರು. ಇನ್ನೀತರ ಪ್ರಕರಣಕ್ಕೆ ಭಿನ್ನವಾಗಿ ತನಿಖೆ ಹಾಗೂ ಪ್ರಕರಣ ಪರಿಶೀಲಿಸುವ ಮತ್ತು ದಾಖಲಿಸುವ ಏಕಕಾಲದಲ್ಲಿ ಪರವಾನಿಗೆ, ಮೇಲ್ನೋಟದ ವಿಚಾರಣೆ, ಕಾನೂನು ಅಭಿಪ್ರಾಯ ಸಂಗ್ರಹ, ಅಧ್ಯಯನವಿಲ್ಲದೇ, ರಾಜಕೀಯ ಪ್ರೇರಿತವಾಗಿ ಈ ಪ್ರಕರಣದ ಹಿನ್ನೇಲೆ ಆಗಿದೆ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.
ಪಕ್ಷ ಮತ್ತು ಸರಕಾರ ಅಸ್ಥಿರಗೊಳಿಸುವ ರಾಜಕೀಯ ತಂತ್ರಗಾರಿಕೆ ಆಗಿದೆ. ಮುಖ್ಯಮಂತ್ರಿಯವರಿಗೆ ಪದಚ್ಯುತಿಗೊಳಿಸಿ ಆಪರೇಶನ್ ಕಮಲ ಕರ್ನಾಟಕದಲ್ಲಿ ಪುನರ್ ಜಾರಿಗೆ ತರುವ ಹುನ್ನಾರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪೂರ್ಣ ಪ್ರಮಾಣದ ನ್ಯಾಯ ಗ್ರಹಿಕೆಯಲ್ಲಿ ವಿಫಲವಾಗಿರುವ ಉಚ್ಚನ್ಯಾಯಾಲಯದ ಆದೇಶ ಸಂಪೂರ್ಣವಾಗಿ ಒಪ್ಪುವಂತಲ್ಲ. ಅರ್ಜಿಯ ಹೊರತಾದ ಅಂಶ ತೀರ್ಪಿನಲ್ಲಿ ಅಡಕವಾಗಿದೆ ಎಂದು ಅವರು ಹೇಳಿದರು.
ಸತ್ಯಾಸತ್ಯತೆ ಹೋರಬರಲು ಸಮಯವಕಾಶ ಬರಬಹುದು ಅಲ್ಲದೇ ಮುಖ್ಯ ಮಂತ್ರಿಯವರು ರಾಜೀನಾಮೆ ಕೊಡುವ ಪ್ರಸಂಗ ಅವಶ್ಯಕತೆವಿಲ್ಲವೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಜಿಲ್ಲಾ ಕಾಂಗ್ರೇಸ್ ಪಕ್ಷದ ವಕ್ತಾರ್ ದೀಪಕ್ ಹೆಗಡೆ ದೊಡ್ಡೂರ್ ಇವರು ಹೇಳಿದರು.
ಗೋಷ್ಠಿಯಲ್ಲಿ ಯಲ್ಲಾಪುರ ವಿಧಾನ ಸಭೆ ಕ್ಷೇತ್ರದ ಪ್ರಚಾರಸಮಿತಿ ಅಧ್ಯಕ್ಷ ಬಾಬು ಗೌಡರ್ ಒದ್ದಲ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಪ್ರಶಾಂತ ಶೆಟ್ಟಿ, ರಾಜ್ಯ ಹಿಂದುಳಿದ ಕಾಂಗ್ರೇಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ರಾಜ್ಯ ಕಾಂಗ್ರೇಸ್ ಕಾನೂನು ಘಟಕದ ಕಾರ್ಯದರ್ಶಿ ಜ್ಯೋತಿ ಗೌಡ ಉಪಸ್ಥಿತರಿದ್ದರು.
ರಾಜೀನಾಮೆ ಪ್ಯಾಶನ್:ಇಂದಿನ ಮೌಲ್ಯಾಧರಿತ ರಾಜೀಕಾರಣದಲ್ಲಿ ರಾಜೀನಾಮೆ ಕೇಳುವದು ಫ್ಯಾಶನ್ ಆಗಿದೆ ೮೦೦೦ ಕೋಟಿ ಇಲೆಕ್ಟ್ರಲ್ ಬಾಂಡ್ ಪ್ರಕರಣದಲ್ಲಿ ಸವೋಚ್ಛ ನ್ಯಾಯಾಲಯವು ಅಸಂವಿಧಾನ ಎಂದು ವ್ಯಾಖ್ಯಾಯಿಸಿತು. ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ೨೩ ಮಂತ್ರಿಗಳ ಮೇಲೆ ಎಫ್.ಐ.ಆರ್ ಮತ್ತು ಪ್ರಕರಣ ವಿಚಾರಣೆಯಲ್ಲಿ ಇದ್ದಾರೆ, ಕೇಂದ್ರ ಸಚಿವರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಮುಖ್ಯ ಮಂತ್ರಿಯವರ ರಾಜೀನಾಮೆ ಬಿಜೆಪಿ ಮತ್ತು ಜೆಡಿಎಸ್‌ನವರು ಅವರು ಪಕ್ಷದವರ ಮೇಲೆ ಇರುವ ಪ್ರಕರಣದ ಮೂಲಧಾರವದು ಖೇದಕರ. ರಾಜೀನಾಮೆ ಕೇಳುವದು ಅವರಿಗೆ ಫ್ಯಾಶನ್ ಆಗಿದೆ ಎಂದು ಅವರು ಹೇಳಿದರು.