ಶಿರಸಿ: ಬಿಎ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಪರೀಕ್ಷಾ ಫಲಿತಾಂಶ ಬಂದಿದ್ದು, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ನೀಡಿದ್ದಾರೆ.
56 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 91.07% ಫಲಿತಾಂಶ ಮಹಾವಿದ್ಯಾಲಯಕ್ಕೆ ಬಂದಿದೆ. ಬಿಎಸ್ಸಿ ಅಂತಿಮ ವರ್ಷಕ್ಕೆ 9.23 ಎಸ್ಜಿಪಿಎ ಅಂಕಗಳೊಂದಿಗೆ ನಾಗರತ್ನ ಬೋವಿವಡ್ಡರ್ ಪ್ರಥಮ, 9.08 ಎಸ್ಜಿಪಿಎ ಅಂಕಗಳನ್ನು ಪಡೆದು ಪಾರ್ವತಿ ಸಿದ್ದರಳ್ಳಿ ದ್ವಿತೀಯ ಹಾಗೂ ಭೂಮಿಕಾ ನಾಯ್ಕ್ 8.96 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ಎಲ್ಲಾ ಸೆಮಿಸ್ಟರ್ ಗಳನ್ನು ಸೇರಿ ಕಾಲೇಜಿಗೆ 8.75 ಸಿಜಿಪಿಎ ಅಂಕಗಳೊಂದಿಗೆ ನಾಗರಾಜ್ ಶೇಟ್ ಪ್ರಥಮ ಸ್ಥಾನ, 8.73 ಸಿಜಿಪಿಎ ಅಂಕಗಳೊಂದಿಗೆ ಐಶ್ವರ್ಯ ಸೂಗಿ ದ್ವಿತೀಯ ಸ್ಥಾನ ಹಾಗೂ 8.52 ಸಿಜಿಪಿಎ ಅಂಕಗಳೊಂದಿಗೆ ಭೂಮಿಕಾ ನಾಯ್ಕ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಂಇಎಸ್ ಅಧ್ಯಕ್ಷ ಜಿಎಂ ಹೆಗಡೆ ಮುಳಖಂಡ, ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್, ಪದಾಧಿಕಾರಿಗಳು, ಪ್ರಾಚಾರ್ಯ ಜಿ.ಟಿ.ಭಟ್, ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.