Slide
Slide
Slide
previous arrow
next arrow

ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿ ನಿರಾತಂಕವಾಗಿ ಸಂಪನ್ನ

300x250 AD

ಸಿದ್ದಾಪುರ: ಪಟ್ಟಣದ ಐತಿಹಾಸಿಕ ನೆಹರು ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾವಳಿ ನಿರಾತಂಕವಾಗಿ ಮಂಗಳವಾರ ಸಂಪನ್ನಗೊಂಡಿತು.

14ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ (ಪ್ರಥಮ), ಹಾವೇರಿ ಜಿಲ್ಲೆ (ದ್ವಿತೀಯ), ಬೆಳಗಾವಿ ಜಿಲ್ಲೆ(ತೃತೀಯ), 14ವರ್ಷ ವಯೋಮಿತಿಯ ಬಾಲಕಿಯರ ವಿಭಾದಲ್ಲಿ ಗದಗ ಜಿಲ್ಲೆ(ಪ್ರಥಮ), ಹಾವೇರಿ ಜಿಲ್ಲೆ (ದ್ವಿತೀಯ), ಬಾಗಲಕೋಟೆ ಜಿಲ್ಲೆ(ತೃತೀಯ),
17ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ(ಪ್ರಥಮ), ಶಿರಸಿ ಶೈಕ್ಷಣಿಕ ಜಿಲ್ಲೆ (ದ್ವಿತೀಯ), ಉತ್ತರ ಕನ್ನಡ ಜಿಲ್ಲೆ(ಕಾರವಾರ) (ತೃತೀಯ).
ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಜಿಲ್ಲೆ (ಪ್ರಥಮ), ಗದಗ ಜಿಲ್ಲೆ(ದ್ವಿತೀಯ) ಹಾಗೂ ಧಾರವಾಡ ಜಿಲ್ಲೆ(ತೃತೀಯ) ಸ್ಥಾನ ಪಡೆದುಕೊಂಡವು.

ಬಾಲಕರ ವಿಭಾಗದ 17ವರ್ಷ ವಯೋಮಿತಿಯ ಪಂದ್ಯದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ಚಿಕ್ಕೋಡಿ ಜಿಲ್ಲೆ ಆಟಗರರು ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷರನ್ನು ರಂಜಿಸಿದ್ದಲ್ಲದೇ ಕೊನೆಯ ಕ್ಷಣದವರೆಗೂ ವಿಜಯಶಾಲಿ ಯಾರಾಗುತ್ತಾರೆಂಬ ಕುತೂಹಲ ಕ್ರೀಡಾಭಿಮಾನಿಗಳದ್ದಾಗಿತ್ತು. ಕೊನೆ ಕ್ಷಣದಲ್ಲಿ ಚಿಕ್ಕೋಡಿ ಜಿಲ್ಲೆಯ ಆಟಗಾರರ ಸಾಂಘಿಕ ಹೋರಾಟದಿಂದಾಗಿ ವಿಜಯದ ನಗೆ ಬಿರಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

300x250 AD

ಬಹುಮಾನ ವಿತರಣೆ: ತಾಲೂಕು ಹೆಸ್ಕಾಂ ಅಧಿಕಾರಿ ನಾಗರಾಜ ಪಾಟೀಲ್, ಸಿದ್ದಾಪುರ ಬಿಇಒ ಎಂ.ಎಚ್.ನಾಯ್ಕ, ಶಿರಸಿ ಬಿಇಒ ನಾಗರಾಜ, ಡಾ.ನಾಗರಾಜ ನಾಡಿಗೇರ , ದತ್ತಾತ್ರೇಯ ನಾಯ್ಕ ಇವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.ಲೋಕೇಶ ನಾಯ್ಕ, ಪ್ರವೀಣ ಕುರುಬರ್, ವಿಜಯಲಕ್ಷ್ಮಿ, ರಾಜೇಂದ್ರ ಕಾಂಬಳೆ, ಗೋಪಾಲ ನಾಯ್ಕ, ಗಣೇಶ ಶಿರಸಿ, ಮಾಧವ ನಾಯ್ಕ ಹಾಗೂ ವಿವಿಧ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ವಿ.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top