Slide
Slide
Slide
previous arrow
next arrow

ಮನರಂಜಿಸಿದ ‘ರುಕ್ಮಿಣಿ ಸ್ವಯಂವರ’ ತಾಳಮದ್ದಲೆ

300x250 AD

ಸಿದ್ದಾಪುರ : ತಾಲೂಕಿನ ಕೋಡಿಗದ್ದೆಯ ಶ್ರೀ ಮೂಕಾಂಬಿಕಾ ದೇವಾಲಯದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರಿಂದ ಕೋಡಿಗದ್ದೆ ದೇವಾಲಯದ ಆವಾರದಲ್ಲಿ ಅ.7ರಂದು ‘ರುಕ್ಮಿಣಿ ಸ್ವಯಂವರ’ ಎಂಬ ತಾಳಮದ್ದಲೆಯನ್ನು ಪ್ರದರ್ಶಿಸಲಾಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷನಾರಾಯಣ ಹೆಗಡೆ ಬೋಳಸುತ್ತು, ಮದ್ದಲೆ ವಾದಕರಾಗಿ ಶ್ರೀಪತಿ ಹೆಗಡೆ ಕಂಚಿಮನೆ, ಚಂಡೆವಾದಕರಾಗಿ ರಘುಪತಿ ಹೆಗಡೆ ಹೂಡೇಹದ್ದ ಇವರುಗಳು ಉತ್ತಮವಾಗಿ ಸಾಥ್ ನೀಡಿದರು. ಮುಮ್ಮೇಳದಲ್ಲಿ ಭೀಷ್ಮನ ಪಾತ್ರದಲ್ಲಿ ತಿಮ್ಮಪ್ಪ ಭಟ್ ಸಾರಂಗ ದೊಡ್ಮನೆ, ಬಲರಾಮನಾಗಿ ಮಾಧವ ಶರ್ಮಾ ಕಲಗಾರ, ಕೃಷ್ಣನಾಗಿ ಟಿ.ಎ. ಹೆಗಡೆ ಬಾನಬ್ಬಿ, ರುಕ್ಮನಾಗಿ ಶ್ರೀಧರ ಭಟ್ ಗಡಿಹಿತ್ಲು, ರುಕ್ಮಿಣಿಯಾಗಿ ಸುಬ್ರಹ್ಮಣ್ಯ ಭಟ್ ಗೋಳಿಕೈ, ಮಾಗಧನಾಗಿ ಕೇಶವ ಹೆಗಡೆ ಕಿಬ್ಳೆ, ಶಿಶುಪಾಲನಾಗಿ ಶಂಕರ ಹೆಗಡೆ ದಾನಮಾಂವ ಇವರುಗಳು ಉತ್ತಮ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಸಂಯೋಜಕರಾದ ಸುಬ್ರಹ್ಮಣ್ಯ ಭಟ್ ಗೋಳಿಕೈ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಕೇಶವ ಹೆಗಡೆ ಕಿಬ್ಳೆ ಕೃತಜ್ಞತೆ ಸಲ್ಲಿಸಿದರು. ದೇವಾಲಯ ಕಮಿಟಿಯವರು ಸಹಕಾರ ನೀಡಿದರು.

300x250 AD
Share This
300x250 AD
300x250 AD
300x250 AD
Back to top