ಕುಮಟಾ: ನಾಡಿನ ಹೆಸರಾಂತ ಯುವ ಲೇಖಕ ಕುಮಟಾದ ಪ್ರಮೋದ ಮೋಹನ್ ಹೆಗಡೆ ಹೆರವಟ್ಟ ಅವರಿಗೆ ಯುವ ಮಲೆನಾಡ ಪುರಸ್ಕಾರ ಪ್ರದಾನ ಮಾಡಲಾಯಿತು.
ಈಗಾಗಲೇ ಪದಚಿಹ್ನ ನಾಮದಲ್ಲಿ ಮೈಸೂರ ಪಾಕ್ ಹುಡುಗ, ನಿಮ್ಮದೀ ನೆಮ್ಮದಿ, ಸಪ್ನಗಿರಿ ಡೈರಿ, ಮಾಯಾನಿಕೇತನ ಅಷ್ಟಾವಕ್ರ ಸೇರಿದಂತೆ ಏಳು ಕೃತಿಗಳು ಬಿಡುಗಡೆಗೊಂಡು ಕನ್ನಡದ ಓದುಗರ ಗಮನ ಸೆಳೆದಿವೆ. ಹಿಂದಿಯಲ್ಲೂ ಬರೆದ ದಿಲ್ ಕೋ ಕಹನಾ ಬಾಕಿ ಹೈ ಕೃತಿ ಸಂಚಲನ ಮೂಡಿಸಿದ್ದವು.
ಪ್ರಮೋದ ಹೆಗಡೆ ಪ್ರಸ್ತುತ ವಿಜಯ ಕರ್ನಾಟಕದಲ್ಲಿ ಸಿನೇಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕಿರು ಚಿತ್ರಗಳಲ್ಲೂ ನಟಿಸಿದ ಪ್ರಮೋದ ವಿಸ್ತಾರ ಟಿವಿ, ವಿಜಯವಾಣಿಯಲ್ಲೂ ಕೆಲಸ ಮಾಡಿದ್ದಾರೆ. ಎಳೆಯ ಹರೆಯದಲ್ಲೇ ಸಾಹಿತ್ಯ, ರಂಗಭೂಮಿಗಳಲಿ ಗುರುತಾದ ಈ ಯುವ ಸಾಧಕರನ್ನು ಬೆಂಗಳೂರಿನಲ್ಲಿ ಶೃಂಗೇರಿ ಶ್ರೀಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ನಡೆಸಿದ ಮಲೆನಾಡು ಉತ್ಸವದಲ್ಲಿ ರಮೇಶ್ ಬೇಗಾರ್ ಹಾಗೂ ರವೀಂದ್ರ ತುಂಬರಮನೆ ತಂಡದವರು ಪುರಸ್ಕಾರ ನೀಡಿ ಗೌರವಿಸಿದರು.
ಪ್ರಮೋದ ಹೆಗಡೆ ಪ್ರಸಿದ್ಧ ಆರ್ಥದಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಹಾಗೂ ಉಷಾ ಹೆಗಡೆ ಅವರ ಪುತ್ರ.