Slide
Slide
Slide
previous arrow
next arrow

ಯಶಸ್ಬಿಯಾಗಿ ಸಂಪನ್ನಗೊಂಡ ಉಚಿತ ಬಂಜೆತನ ತಪಾಸಣಾ ಶಿಬಿರ

300x250 AD

ದಾಂಡೇಲಿ : ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಶನಿವಾರ ನಡೆದ ಉಚಿತ ಬಂಜೆತನ ತಪಾಸಣಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಮೋಹನ‌ ಪಾಟೀಲ್ ಉಚಿತ ಬಂಜೆತನ ತಪಾಸಣಾ ಶಿಬಿರ ಉಪಯುಕ್ತವಾದ ಶಿಬಿರವಾಗಿದ್ದು, ಬಂಜೆತನ ಸಮಸ್ಯೆಯಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ‌ ನೀಡಿದರು.

ಶಿಬಿರದ ವೈದ್ಯಾಧಿಕಾರಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ವೈದ್ಯರಾದ ಡಾ.ಪವಿತ್ರಾ ಶ್ಯಾಮಸುಂದರ್ ಬಂಜೆತನ ಶಾಪವಲ್ಲ. ಅದಕ್ಕೆ ಪರಿಹಾರವಿದೆ. ತಜ್ಞ ವೈದ್ಯರನ್ನು ಸಂಪರ್ಕಿಸಿ ಪರಿಹಾರವನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯು ಬಂಜೆತನ ಸಮಸ್ಯೆ ನಿವಾರಣೆಗಾಗಿ ಸದಾ ಶ್ರಮಿಸುತ್ತಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಸಿಬ್ಬಂದಿಗಳಾದ ಬಸವರಾಜ್, ಸುಲೇಮಾನ್ ಸಾವಿತ್ರಿ ಹಾಗೂ ಪಾಟೀಲ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top