Slide
Slide
Slide
previous arrow
next arrow

ಸಮುದ್ರ‌ತೀರದ‌ ಸ್ವಚ್ಛತಾ ಜವಾಬ್ದಾರಿ ಮೀನುಗಾರರದ್ದು: ಅನಂತ ಹೆಗಡೆ ಅಶೀಸರ

300x250 AD

ಹೊನ್ನಾವರ : ಸಮುದ್ರ ತೀರದ ಸ್ವಚ್ಛತೆಯ ಜವಾಬ್ದಾರಿ ಆ ಭಾಗದ ಮೀನುಗಾರರದ್ದಾಗಿದೆ. ಹೆಚ್ಚಿನ ಆಸಕ್ತಿ ವಹಿಸಿ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅನಂತ ಹೆಗಡೆ ಅಶೀಸರ ಹೇಳಿದರು.

ಅವರು ತಾಲೂಕಿನ ಕಾಸರಕೋಡ ಟೊಂಕ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಕಡಲತೀರ ಸ್ವಚ್ಚತಾ ದಿನದ ಅಂಗವಾಗಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು. ಟೊಂಕಾ ಕಡಲತೀರ ಕಡಲಾಮೆ ಮೊಟ್ಟೆ ಇಡುವ ಪ್ರದೇಶವೆಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯು ಶಿಪಾರಸು ಮಾಡಿರುತ್ತದೆ ಎಂದು ತಿಳಿಸಿದರು. 

300x250 AD

ಸ್ವಚ್ಚತಾ ಕಾರ್ಯದಲ್ಲಿ ಎಸ್. ಡಿ. ಎಂ ಕಾಲೇಜಿನ NCC ವಿದ್ಯಾರ್ಥಿಗಳು, ಮೀನುಗಾರರು ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಸೇರಿದಂತೆ 150 ಜನ ಪಾಲ್ಗೊಂಡಿದ್ದರು. 500 ಮೀಟರ್ ಪ್ರದೇಶದಲ್ಲಿ 1325 ಕೆಜಿ ತಾಜ್ಯ ಸಂಗ್ರಹಣೆ ಮಾಡಿದ್ದರು. ಇದರಲ್ಲಿ 29 ಪ್ರತಿಶತ ಪ್ಯಾಸ್ಟಿಕ ತಾಜ್ಯವಾಗಿರುವದಾಗಿ ಆಯೋಜಕರಾದ ನ್ಯಾಷನಲ್ ಸೆಂಟರ್ ಫಾರ್ ಕೋಸ್ಟಲ್ ರಿಸರ್ಚ್ (NCCŖ) ಮಿನಿಸ್ಟರಿ ಒಫ್ ಅರ್ಥ್ ಸೈನ್ಸ್ ̧ (MoEŞ) ಗವರ್ನಮೆಂಟ್ ಒಫ್ ಇಂಡಿಯಾ (GOI) ನ ಟೊಂಕಾ ಬೀಚ್ ಸ್ಪಚ್ಚತಾ ಸಂಚಾಲಕರು ತಿಳಿಸಿದರು.

Share This
300x250 AD
300x250 AD
300x250 AD
Back to top