Slide
Slide
Slide
previous arrow
next arrow

ಸದಸ್ಯತ್ವ ಹೆಚ್ಚಿದಂತೆ ಪಕ್ಷ ಬಲವರ್ಧನೆ ಸಾಧ್ಯ: ಸಂಸದ ಕಾಗೇರಿ

300x250 AD

ಹಾರ್ಸಿಕಟ್ಟಾದಲ್ಲಿ ಬಿಜೆಪಿ ಗ್ರಾಮೀಣ ಸದಸ್ಯತಾ ಅಭಿಯಾನಕ್ಕೆ ಚಾಲನೆ

ಸಿದ್ದಾಪುರ: ಸದಸ್ವತ್ವವನ್ನು ಹೆಚ್ಚಿಗೆ ಮಾಡುವುದರಿಂದ ಪಕ್ಷದ ಸಂಘಟನೆಗೆ ಹೆಚ್ಚು ಅನೂಲಕವಾಗುವುದರ ಜತೆಗೆ ಪ್ರದಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಸಭಾಂಗಣದಲ್ಲಿ ನಡೆದ ಗ್ರಾಮೀಣ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಸೋಮವಾರ ಮಾತನಾಡಿ, ಸದಸ್ಯತ್ವ ಅಭಿಯಾನದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನ್ನು ಪಾಲ್ಗೊಂಡು ಸದಸ್ಯತ್ವದ ವೇಗ ಹೆಚ್ಚಿಸಬೇಕಾಗಿದ್ದು, ಪ್ರತಿಬೂತ್‌ನಲ್ಲಿ ಮೂರನೂರಕ್ಕೂ ಹೆಚ್ಚು ಸದಸ್ವತ್ವ ಆಗಬೇಕಾಗಿದೆ.
ಕೇಂದ್ರಸರ್ಕಾರದ ಯೋಜನೆಗಳು ಜನಪರವಾಗಿದ್ದು ಈ ಎಲ್ಲ ಯೋಜನೆಗಳು ಜನರಿಗೆ ತಲುಪುವಂತಾಗಬೇಕು. ಜಿಲ್ಲೆಯಲ್ಲಿ 250 ನೂತನ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಯಾವ ಭಾಗದಲ್ಲಿ ಇಲ್ಲಿಯವೆಗೆ ನೆಟ್‌ವರ್ಕ್ ಲಭ್ಯ ಇಲ್ಲವೋ ಅಂತಹ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಕೆಲವು ಕಡೆ ಉದ್ಘಾಟನೆ ಮಾಡಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬಿಎಸ್‌ಎನ್‌ಎಲ್ ಕೇಂದ್ರದಲ್ಲಿನ ಬ್ಯಾಟರಿ ಹಾಳಾದಲ್ಲಿ ಅಲ್ಲಿ ಹೊಸ ಬ್ಯಾಟರಿಯನ್ನು ಕೆಲವೇ ದಿನದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.

300x250 AD

ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರ ಒಲೈಕೆಯಲ್ಲಿ ತೊಡಗಿಕೊಂಡಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ರಸ್ತೆಯಲ್ಲಿನ ಹೊಂಡ ಮುಚ್ಚುವುದಕ್ಕೂ ಆಗದ ಸ್ಥಿತಿ ರಾಜ್ಯ ಸರ್ಕಾರದ್ದಾಗಿದೆ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್, ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಸದಸದಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದರು. ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ, ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ಎಸ್.ಕೆ.ಮೇಸ್ತಾ, ನಾರಾಯಣ ಹೆಗಡೆ ಚಾರೆಕೋಣೆ ಇತರರಿದ್ದರು. ಗಣೇಶ ಹೆಗಡೆ ಕರ್ಕಿಸವಲ್ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top