ಭಟ್ಕಳ: ಅರಣ್ಯ ಹಕ್ಕು ಕಾಯಿಂದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಕಾನೂನಿಗೆ ವ್ಯತಿರಿಕ್ತವಾಗಿ ಜರುಗಿದ ಅಸಮರ್ಪಕ ಜಿ.ಪಿ.ಎಸ್‌ಗೆ ಅರಣ್ಯವಾಸಿಯು ಹಕ್ಕು ಸಮಿತಿಯ ಪ್ರಾಧಿಕಾರಕ್ಕೆ ಸಲ್ಲಿಸಿದ ಮೇಲ್ಮನವಿ ಪುನರ್ ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.
ಅವರು ಭಟ್ಕಳ ತಾಲೂಕಿನಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಪ್ರಾಧಿಕಾರಕ್ಕೆ ಸಲ್ಲಿಸಲಾದ ಅಸಮರ್ಪಕ ಜಿ.ಪಿ.ಎಸ್ ಮೇಲ್ಮನವಿಯ ಸ್ವೀಕೃತಿ ಪ್ರತಿಯನ್ನು ಅರಣ್ಯವಾಸಿಗಳಿಗೆ ವಿತರಿಸುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆಯ ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಯ ಸಾಗೂವಳಿ ನಿರ್ದಿಷ್ಟ ಗಡಿ ನಿರ್ಧರಿಸುವ ಉದ್ದೇಶದಿಂದ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಯ ನೇತೃತ್ವದಲ್ಲಿ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳ ಕ್ಷಮ ಕ್ಷಮ ಜಿ.ಪಿ.ಎಸ್ ಕಾರ್ಯ ಜರುಗಿದ್ದವು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಜಿಲ್ಲಾ ಸಂಚಲಕರಾದ ದೇವರಾಜ ಗೊಂಡ,ಹರಿ ನಾಯ್ಕ ಓಂಕಾರ, ಶಬ್ಬೀರ್,ಕಯುಮಾ ಕೋಲಾ,ಮಂಜುನಾಥ ನಾಯ್ಕ,ದೇವು ಗೋಮ ಮರಾಠಿ, ಅಣ್ಣಪ್ಪ ನಾಯ್ಕ, ಮಂಜುನಾಥ ಹಾಡುಹಳ್ಳಿ, ದತ್ತು ನಾಯ್ಕ, ಮೋಹನ್ ಸಣ್ಣು ಗೊಂಡಾ, ಮಂಗಲಾ ಶೆಟ್ಟಿ ಗುಡಿಹಿತ್ಲು ಮುಂತಾದವರು ಉಪಸ್ಥಿತರಿದ್ದರು.
ಶೇ ೭೨% ರಷ್ಟು ಅಸರ್ಪಕ ಜಿ.ಪಿ.ಎಸ್:
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ೮೫೭೫೭ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ಶೇ ೭೨ ರಷ್ಟು ಅರ್ಜಿಗಳಿಗೆ ಅಸಮರ್ಪಕ ಜಿ.ಪಿ.ಎಸ್ ಆಗಿದ್ದು ಸಾಗೂವಳಿ ಕ್ಷೇತ್ರ, ಬಾವಿ, ಅಂಗಳ, ಕೊಟ್ಟಿಗೆ ,ಸಾಗುವಳಿ ಕ್ಷೇತ್ರ ಬಿಟ್ಟು ಜಿ.ಪಿ.ಎಸ್ ಆಗದಿರುವುದರಿಂದ ಅನ್ಯಾಯಕ್ಕೊಳಗಾದ ಅರಣ್ಯವಾಸಿಸಿಗಳು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.