Slide
Slide
Slide
previous arrow
next arrow

ಪಿಎಂ ಸ್ವ-ನಿಧಿ ಯೋಜನೆ: ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ

300x250 AD

ಕಾರವಾರ: ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಾರವಾರ ನಗರಸಭೆಯು ““Best Performing ULB-in Loan performance at State Level” ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೇಂದ್ರ ಸರ್ಕಾರದ ವತಿಯಿಂದ ಪಿಎಂ ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ರಾಜ್ಯಗಳಿಗೆ ನವದೆಹಲಿಯಲ್ಲಿ ಸಮಾರಂಭ ಆಯೋಜಿಸಿ ರಾಷ್ಟçಮಟ್ಟದ Utkrishtata Ki ore Badhte Kadam & Celebreating Achivements, Inspiring Excellence ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಪಿಎಂ ಸ್ವ-ನಿಧಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನಗರಸ್ಥಳೀಯ ಸಂಸ್ಥೆಗಳಿಗೆ ಸಂಬAಧಿಸಿದAತೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದೇ ಆಗಸ್ಟ್ 22 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಾರವಾರ ನಗರಸಭೆಯಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ನಗರಸಭೆಯ ಪೌರಾಯುಕ್ತ ಜಗದೀಶ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತ್ ಕುಮಾರ ಹಬ್ಬು, ಕೌಶಲ್ಯಾಭಿವೃದ್ಧಿ ಇಲಾಖೆಯ ಮಲ್ಟಿಟಾಸ್ಕಿಂಗ್ ಆಫಿಸರ್ ಸುನೀಲ ವಸಂತ ನಾಯ್ಕ, ಸಮುದಾಯ ಸಂಘಟಕರಾದ ಪ್ರಭಾಕರ ನಾಯ್ಕ ಮತ್ತು ಮೇರಿ ಡಿಸೋಜಾ , CRP ಗಳಾದ ಗೀತಾ, ನಂದಿನಿ ಶ್ರಮಿಸಿದ್ದರು.

300x250 AD
Share This
300x250 AD
300x250 AD
300x250 AD
Back to top