Slide
Slide
Slide
previous arrow
next arrow

ರೈತರು‌, ಕೃಷಿ ಕಾರ್ಮಿಕರೇ ಕೆಡಿಸಿಸಿ ಬ್ಯಾಂಕ್‌ನ ‘ಶಕ್ತಿ’

300x250 AD

ಕುಮಟಾದ ಹೆಗಡೆ, ಕತಗಾಲದಲ್ಲಿ ನೂತನ ಶಾಖೆ ಉದ್ಘಾಟಿಸಿದ ಶಾಸಕ‌ ಹೆಬ್ಬಾರ್

ಕುಮಟಾ: ರೈತರ ಶ್ರೇಯಸ್ಸಿಗೆ ಸದಾಕಾಲ ಕೆಡಿಸಿಸಿ ಬ್ಯಾಂಕ್ ಬದ್ಧವಾಗಿದೆ. ಸಾಲ-ಸೌಲಭ್ಯ ನೀಡುವ ಮೂಲಕ ರೈತರಿಗೆ ನೆರವಾಗುತ್ತಿದ್ದು, ಜಿಲ್ಲೆಯ ಬಹುಪಾಲು ರೈತರು, ಕೃಷಿ ಕಾರ್ಮಿಕರು ಬ್ಯಾಂಕ್ ಮೇಲೆ ವಿಶ್ವಾಸವಿರಿಸಿದ್ದರಿಂದಲೇ ನಾವು ಹಂತ ಹಂತವಾಗಿ ಮೇಲೆ ಬರುತ್ತಿದ್ದೇವೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಹೆಗಡೆಯಲ್ಲಿ 58ನೇ ಹಾಗೂ ಕತಗಾಲದಲ್ಲಿ 59ನೇ ನೂತನ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಶಾಖೆಗಳ ಉದ್ಘಾಟನೆಯಿಂದ ಬ್ಯಾಂಕ್ ಆರ್ಥಿಕವಾಗಿ ಆರೋಗ್ಯಯುತವಾಗಿದೆ ಎಂಬುದು ಮತ್ತೆ ರುಜುವಾತಾಗಿದೆ ಎಂದರು.1 ಸಾವಿರ ಕೋಟಿ ರೂ. ಬೆಳೆಸಾಲ ಹಾಗು 500 ಕೊಟಿ ರೂ. ಮಾಧ್ಯಮಿಕ ಸಾಲವನ್ನು ನೀಡಲಾಗಿದೆ. ಕೆಡಿಸಿಸಿ ಬ್ಯಾಂಕ್ ಆದಾಯ ತರದ (ಎನ್‌ಪಿಎ) ಆಸ್ತಿ ವರ್ಗಕರಣದಲ್ಲಿ 2ಕ್ಕೆ ಇಳಿದಿದೆ ಎಂದರು.
ಕುಮಟಾ ತಾಲೂಕಿಗೆ 64-65 ಕೋಟಿ ರೂ. ಸಾಲವನ್ನು ನೀಡಲಾಗುತ್ತಿದೆ. ನೀಡಿರುವ ಸಾಲ ವಸೂಲಾತಿಯಲ್ಲಿಯೂ ಶೇ. 99.6 ಅಗ್ರಶ್ರೇಣಿಯಲ್ಲಿದೆ.

104 ವರ್ಷಗಳಲ್ಲಿ 47 ಬಾರಿ ಅಪೆಕ್ಸ್ ಬ್ಯಾಂಕ್‌ನ ಪ್ರಶಸ್ತಿಗೆ, 6 ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದೇವೆ. ಒಂದೇ ಒಂದು ವರ್ಷವೂ ಹಾನಿ ಕಾಣದೇ 104 ವರ್ಷಗಳ ಕಾಲವೂ ಲಾಭದಲ್ಲಿಯೇ ಪ್ರಗತಿಯತ್ತ ದಾಪುಗಾಲಿಡುತ್ತಿರುವುದು ಜನರಿಂದ, ರೈತರಿಂದ ಸಾರ್ವಜನಿಕರಿಂದ ಎಂದರು

ನಮ್ಮ ಬ್ಯಾಂಕ್‌ಗಳಲ್ಲಿ ಜಿಲ್ಲೆ ಜನರಿಗೆ ಸಾಲ ಸೌಲಭ್ಯ ನೀಡಿ ಬಡ ಮತ್ತು ಮಧ್ಯಮ ವರ್ಗದ ಜನರ ನೆರವಿಗೆ ಧಾವಿಸಿ, ಗ್ರಾಹಕರ ವಿಶ್ವಾಸ ಗಳಿಸಿದೆ. ಆದರೆ ಬಡವರ, ರೈತರ ನೆರವಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಧಾವಿಸದಿರುವುದು ವಿಷಾದನೀಯ ಎಂದರು.

300x250 AD

ಗ್ರಾಮೀಣ ಭಾಗದ ರೈತರಿಗೆ ಸಕಾಲದಲ್ಲಿ ಸೇವೆ ದೊರಕಿಸಿಕೊಡಬೇಕು ಎಂಬ ಕಾರಣಕ್ಕೆ ಕುಮಟಾದಲ್ಲಿ 4 ಹೊಸ ಶಾಖೆ ಆರಂಭಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ನಿರ್ದೇಶಕ ಗಜು ಪೈ ಮಾತನಾಡಿ, ಸುದೀರ್ಘ ವರ್ಷಗಳ ಕಾಲ ಬ್ಯಾಂಕ್ ಅನ್ನು ಮುನ್ನಡೆಸಿದ ಹಿರಿಯರೆಲ್ಲರ ಶ್ರಮವನ್ನು ಈ ದಿನ ನಾವು ಸ್ಮರಿಸಿಕೊಳ್ಳಬೇಕು. ವಿಶ್ವಾಸವಿಟ್ಟು ನಮ್ಮ ಜೊತೆಗಿರುವ ರೈತಾಪಿ ವರ್ಗ ಸಾರ್ವಜನಿಕರ ಭರವಸೆ ನಮ್ಮ ಬ್ಯಾಂಕಿನ ಬದುಕಾಗಿದೆ.ಬ್ಯಾಂಕಿನ ಸಾಧನೆಗೆ ಗ್ರಾಹಕರ ವಿಶ್ವಾಸವೇ ಮುಖ್ಯ ಕಾರಣ. ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಆಗಬೇಕು ಎಂಬ ಕೂಗು ಬಹಳ ವರ್ಷಗಳಿಂದ ರೈತ ಕೇಳಿಬಂದಿತ್ತು. ಅಧ್ಯಕ್ಷ ಶಿವರಾಮ ಹೆಬ್ಬಾರ್ ಪ್ರಯತ್ನದ ಫಲವಾಗಿ ಇಂದು ನೂತನ ಶಾಖೆ ಗ್ರಾಮೀಣ ಭಾಗವಾದ ಹೆಗಡೆ ಮತ್ತು ಕತಗಾಲ ಭಾಗದಲ್ಲಿ ಆರಂಭವಾಗಿರುವುದು ಬಹು ವರ್ಷಗಳ ಕನಸು ನನಸಾದಂತಾಗಿದೆ ಎಂದರು.

ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರು ಶಾನಭಾಗ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅತಿಯಾದ ಆಂಗ್ಲ ಭಾಷೆಯಿಂದ ರೈತರು, ಬಡವರು ಸಂಕಷ್ಟದಲ್ಲಿ ಕಾಲ ಕಳೆಯುವ ಇಂದಿನ ದಿನಮಾನದಲ್ಲಿ ಗ್ರಾಮೀಣ ಭಾಗದಲ್ಲೂ ಕೆಡಿಸಿಸಿ ಬ್ಯಾಂಕ್ ಶಾಖೆ ಆರಂಭವಾಗಿರುವುದು ಹೆಮ್ಮೆಯ ಸಂಗತಿ ಎಂದು ವಿವರಿಸಿದರು.

ಕಾರವಾರ ನಿರ್ದೇಶಕ ಪ್ರಕಾಶ ಗುನಗಿ, ಅಂಕೋಲಾ ಸೊಸೈಟಿ ಅಧ್ಯಕ್ಷ ಬೀರಣ್ಣ ನಾಯಕ, ರಾಮಕೃಷ್ಣ ಹೆಗಡೆ ಕಡವೆ, ಶ್ರೀಕಾಂತ ಭಟ್ಟ, ವಿ.ಪಿ.ಹೆಗಡೆ, ಹೆಗಡೆ ಹಾಗೂ ಕತಗಾಲ ಶಾಖಾ ವ್ಯವಸ್ಥಾಪಕರಾದ ಸವಿತಾ ಪಟಗಾರ ಹಾಗೂ ಡಿ.ಎಸ್.ಭಟ್ಟ, ವಾಮನ ನಾಯ್ಕ, ವಿ.ಪಿ.ಶಾನಭಾಗ, ತಿಮ್ಮಣ್ಣ ಹೆಗಡೆ, ಹೆಗಡೆ ಮತ್ತು ಅಳಕೋಡ ಗ್ರಾ.ಪಂ ಪ್ರತಿನಿಧಿಗಳು, ರೈತರು, ಗ್ರಾಹಕರು ಉಪಸ್ಥಿತರಿದ್ದರು. ಗಿರೀಶ ಮಾಡಗೇರಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top