ಶಿರಸಿ:ನಗರದ ಅಂಬಾಗಿರಿಯ ಕಾಳಿಕಾ ಭವಾನಿ ದೇವಸ್ಥಾನದ ಸಭಾಗೃಹದಲ್ಲಿ “ಶ್ರೀ ಶಂಕರ ಭಗವತ್ಪಾದರ ತತ್ವ ಸಂದೇಶ”ಗಳನ್ನಾಧರಿಸಿದ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದಿಗಳಾಗಿ ವಿದ್ವಾನ್ ಮಹೇಶ ಭಟ್ಟ ಮತ್ತು ವಿದ್ವಾನ್ ನಾಗೇಶ್ ಭಟ್ ತಮ್ಮ ವಿದ್ವತ್ ಪೂರ್ಣ ಮಂಡನೆಯಿಂದ ಶಂಕರರ ಕುರಿತು ಪ್ರಶ್ನೋತ್ತರಗಳ ಮೂಲಕ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಶ್ರೀಮತಿ ವಿಜಯಾ ಶಾನಭಾಗ್ ಅತಿಥಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪುರಸ್ಕೃತರಾದ ಇಂಜನೀಯರ್ ಮನು ಹೆಗಡೆ ಅವರನ್ನು ಸಕಲ ಸಮ್ಮಾನಗಳೊಂದಿಗೆ ಸನ್ಮಾನಿಸಲಾಯಿತು. ಸನ್ಮಾನ ನನ್ನ ಮಾತಾ ಪಿತೃಗಳಿಗೆ ಸಲ್ಲಬೇಕು ಎಂದು ಮನು ಹೆಗಡೆ ಭಾವುಕರಾಗಿ ವ್ಯಕ್ತಪಡಿಸಿದರು. ‘ನಿರ್ಮಾಣದಲ್ಲಿ ವಿವಿಧ ತ್ಯಾಜ್ಯಗಳ ಪುನರ್ ಬಳಕೆ’ ಎಂಬ ವಿದ್ವತ್ ಪೂರ್ಣ ಪ್ರಬಂಧ ವಿಶ್ವವಿದ್ಯಾಲಯದಿಂದ ಪ್ರಶಂಸನಾಯುಕ್ತ ಅಂಗೀಕಾರವಾಗಿದೆ.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವೈದ್ಯತ್ರಯರಾದ ನೇತ್ರತಜ್ಞ ಶಿವರಾಂ ಕೆ.ವಿ., ಜ್ಞಾನ ಪ್ರಕಾಶ್ ಕಾರಂತ್, ವಿನಾಯಕ ಹೆಬ್ಬಾರ್ ಅವರುಗಳು ತಮ್ಮ ಅನುಭವಗಳ ಮಾತುಗಳನ್ನಾಡಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರ “ಅನಾವರಣ”ಚಾತುರ್ಮಾಸದ ಆಮಂತ್ರಣವನ್ನು ವಲಯಾಧ್ಯಕ್ಷ ಶಂಕರ ಹೆಗಡೆ, ವಿ.ವಿ.ವಿ. ಮುಖ್ಯಸ್ಥರಾದ ಆರ್.ಎಸ್.ಹೆಗಡೆ ಹರಗಿ, ವಿ.ಎಂ.ಹೆಗಡೆ ಆಲ್ಮನೆ ಎಲ್ಲ ಗುರಿಕಾರರ, ಅತಿಥಿಗಳ ಸಮ್ಮುಖ ಬಿಡುಗಡೆ ಮಾಡಿದ ಕಾರ್ಯಕ್ರಮದ ಸರ್ವಾಧ್ಯಕ್ಷ ಎಲ್.ಆರ್. ಭಟ್ ತೆಪ್ಪ, ತಮ್ಮ ಸಂತಸ ತಿಳಿಸಿ ಇಂತಹ ಕಾರ್ಯ ಹೆಚ್ಚೆಚ್ಚು ಆಗಬೇಕೆಂದರು.
ಪ್ರಶಸ್ತಿ ವಿಜೇತ ಶಿಕ್ಷಕ ಉದಯ ಭಟ್ಟ ಅತಿಥಿಗಳ ಪರಿಚಯ ಮಾಡಿದರು. ಲಕ್ಷ್ಮಣ ಶಾನಬೋಗ್ ಸ್ವಾಗತಿಸಿದರು. ಡಿ.ಎ. ಹೆಗಡೆ ವಂದಿಸಿದರು. ಕಾರ್ಯಕ್ರಮ ಸಂಯೋಜಕ ದತ್ತಾತ್ರೇಯ ಎಸ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.