ಯಲ್ಲಾಪುರ : ತಾಲೂಕಿನ ಚಿಪಗೇರಿಯ ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಗೆ 3 ವರ್ಷದ ಅವಧಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ರವಿವಾರ ಸಂಜೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕರ್ನಾಟಕದಲ್ಲಿ ವನವಾಸಿ ಕಲ್ಯಾಣದ ಮೊದಲನೆಯ ವಿದ್ಯಾರ್ಥಿ ನಿಲಯ ಚಿಪಗೇರಿಯಲ್ಲಿ ಆರಂಭಗೊಂಡು 38 ವರ್ಷ ಕಳೆದಿದೆ. ಇದೀಗ ರಾಜ್ಯದಲ್ಲಿ 8 ವಿದ್ಯಾರ್ಥಿ ನಿಲಯಗಳು ಕ್ರಿಯಾಶೀಲವಾಗಿ ನಡೆಯುತ್ತಿವೆ. ವನವಾಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ ಎಂದರು.
ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮಂಜುನಾಥ ಶಾಸ್ತ್ರಿ, ಉಪಾಧ್ಯಕ್ಷರಾಗಿ ಸೋಮನಾಥ ಸಿದ್ದಿ, ಗೌರವಾಧ್ಯಕ್ಷರಾಗಿ ಎಂ.ಕೆ.ಹೆಗಡೆ, ಕಾರ್ಯದರ್ಶಿಯಾಗಿ ಭಾಗು ಶೆಳಕೆ ಆಯ್ಕೆಯಾದರು. ಸದಸ್ಯರಾಗಿ ಸಿ.ಆರ್.ಶ್ರೀಪತಿ, ಸುರೇಶ ಸಿದ್ದಿ, ವಿಠ್ಠಲ ತೋರ್ವತ್, ಗಿರಿಜಾ ಖಾಂಡೇಕರ್, ಸುಮಂಗಲಾ ಸಿದ್ದಿ, ಸಿದ್ದು ತೋರ್ವತ್, ಸಿದ್ದು ಜೋರೆ, ಈಶ್ವರ ಸಿದ್ದಿ ಆಯ್ಕೆಯಾದರು. ನಿಲಯದ ನೂತನ ವ್ಯವಸ್ಥಾಪಕರಾದ ವಿಜಯಕುಮಾರ, ಗೀತಾ ಧಾರವಾಡಕರ್ ಹಾಗೂ ಲಕ್ಷ್ಮಿ ಇವರನ್ನು ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ರಮೇಶ ರಾವ್ ಕಂಚೀಕೊಪ್ಪ, ಕಾರ್ಯದರ್ಶಿ ಮಹಾಬಲೇಶ್ವರ ಕೆ.ಹೆಗಡೆ, ರಾಮಾ ಸಿದ್ದಿ, ಸಿದ್ದು ತೋರ್ವತ್, ಪ್ರಾಂತ ಮಹಿಳಾ ಅಧ್ಯಕ್ಷೆ ಗೌರಿ ಭಟ್ಟ, ವೆಂಕಟರಮಣ ಭಟ್ಟ ಉಪಸ್ಥಿತರಿದ್ದರು.