ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದಿಸುವ ಹಿನ್ನಲೆಯಲ್ಲಿ ಜೂ. 25, ಮಂಗಳವಾರ ಮುಂಜಾನೆ 10.30 ಕ್ಕೆ ಶಿರಸಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಅರಣ್ಯವಾಸಿಗಳ ಸಾಗುವಳಿಯ ಸಂದರ್ಭದಲ್ಲಿ ಉಂಟಾಗುತ್ತಿರುವ ಅನಾನೂಕುಲತೆ, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಿ ಪ್ರಕ್ರಿಯೆ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿಗೆಗೆ ಉಂಟಾಗುತ್ತಿರುವ ಸಮಸ್ಯೆಗಳು ಹಾಗೂ ಜಿ.ಪಿ.ಎಸ್. ಮಾನದಂಡದಿಂದ ಉಂಟಾಗುತ್ತಿರುವ ಕಾನೂನಾತ್ಮಕ ಸಮಸ್ಯೆಗಳ ಕುರಿತು ಚರ್ಚಿಸಿ, ಅರಣ್ಯ ಇಲಾಖೆಯ ಅರಣ್ಯವಾಸಿಗಳ ಸಮಸ್ಯೆಗಳನ್ನ ಗಮನಕ್ಕೆ ತರುವ ಉದ್ದೇಶದಿಂದ ಅದಾಲತ್ ಸಂಘಟಿಸಲಾಗಿದೆ ಎಂದು ಅವರು ಹೇಳಿದರು.
ಅದಾಲತ್ ಕಾರ್ಯಕ್ರಮದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದು, ಅರಣ್ಯವಾಸಿಗಳ ಸಮಸ್ಯೆಗಳಿಗೆ ಅದಾಲತ್ನಲ್ಲಿ ಸ್ಪಂಧಿಸುವರೆAದು ಅವರು ತಿಳಿಸಿದ್ದಾರೆ.
ಹೆಸರು ನೋಂದಾವಣೆ:
ಅದಾಲತ್ನಲ್ಲಿ ಸಮಸ್ಯೆಗಳನ್ನ ಮಂಡಿಸಲು ಇಚ್ಛಿಸುವಂತ ಅರಣ್ಯವಾಸಿಗಳು ಜೂ:೨೨ ಶನಿವಾರ ಸಂಜೆ ೫ ಗಂಟೆ ಒಳಗೆ ಕಾರ್ಯಾಲಯದ ವಾಟ್ಸಪ್ ನಂ:೮೦೭೩೮೪೭೧೪೫ ಕ್ಕೆ ಸಂದೇಶ ಕಳಿಸಿ ಹೆಸರು ನೋಂದಾಯಿಸತಕ್ಕದ್ದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.