ಹೊನ್ನಾವರ: ಕಾಡು ಉಳಿದರೆ ನಾಡು ಉಳಿಯುತ್ತದೆ, ಪರಿಸರವನ್ನು ರಕ್ಷಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂದು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಉಮೇಶ ಹೆಗಡೆ ನುಡಿದರು. ಇವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ವನ ಮಹೋತ್ಸವ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಡಳಿತಾಧಿಕಾರಿ ಎಂ.ಎಸ್.ಹೆಗಡೆ ಗುಣವಂತೆ “ಪರಿಸರ ನಾಶ ನಮ್ಮ ಭವ್ಯ ಜೀವನವನ್ನು ನಾಶ ಮಾಡಿಕೊಂಡಂತೆ, ಉತ್ತಮವಾಗಿ ಮಳೆ-ಬೆಳೆ ಬರಬೇಕಾದರೆ ಕಾಡು ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬರೂ ಗಿಡವನ್ನು ನೀಡುವುದರ ಮೂಲಕ ಕಾಡನ್ನು ಬೆಳೆಸಬೇಕು, ಅದನ್ನು ರಕ್ಷಿಸಬೇಕು ಎಂದು ನುಡಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಶಿಕ್ಷಕಿ ಕೀರ್ತಿ ನಾಯ್ಕ ಸ್ವಾಗತಿಸಿದರೆ, ಸೌಮ್ಯ ಹೆಗಡೆ ವಂದಿಸಿದರು. ಅಂಜನಾ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.