ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಮತಯಂತ್ರದಲ್ಲಿ ಅಭ್ಯಥಿಗಳ ಹೆಸರು ಕನ್ನಡ ಭಾಷೆಯ ಜೊತೆಗೆ ಮರಾಠಿ ಭಾಷೆಯಲ್ಲಿಯೂ ಮುದ್ರಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಮತದಾರರು ಇರುವ ಕಾರಣ, ಮತದಾರರು ತಾವು ಮತ ಚಲಾಯಿಸಬೇಕಾದ ಅಭ್ಯರ್ಥಿಯ ಹೆಸರನ್ನು ಹುಡುಕುವಲ್ಲಿ ಗೊಂದಲಕ್ಕೆ ಒಳಗಾಗದೇ, ತಾವು ಬಳಸುವ ಭಾಷೆಯಲ್ಲಿಯೇ ಗುರುತಿಸಲು ಅನುಕೂಲವಾಗುವಂತೆ, ಚುನಾವಣೆಯ ಅಂತಿಮ ಕಣದಲ್ಲಿ ಉಳಿಯವ ಅಭ್ಯರ್ಥಿಗಳನ್ನು ಹೆಸರನ್ನು ಬ್ಯಾಲೆಟ್ ಯಂತ್ರದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಮುದ್ರಿಸಲು ನಿರ್ದೇಶನ ನೀಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.